Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ: ನಾನೇ ಗೆದ್ದಿದ್ದೇನೆ ಎಂದು ಘೋಷಿಸಿಕೊಂಡ ಚಂದನ್ ಶೆಟ್ಟಿ!

ಬಿಗ್ ಬಾಸ್ ಕನ್ನಡ: ನಾನೇ  ಗೆದ್ದಿದ್ದೇನೆ ಎಂದು ಘೋಷಿಸಿಕೊಂಡ ಚಂದನ್ ಶೆಟ್ಟಿ!
ಬೆಂಗಳೂರು , ಶುಕ್ರವಾರ, 5 ಜನವರಿ 2018 (09:22 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಯಾರು ಎಂದು ಸುದೀಪ್ ವೇದಿಕೆಯಲ್ಲಿ ಘೋಷಿಸಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಆಗಲೇ ಚಂದನ್ ಶೆಟ್ಟಿ ನಾನೇ ವಿನ್ನರ್ ಎಂದು ಘೋಷಿಸಿಕೊಂಡಿದ್ದಾರೆ.
 

ಆದರೆ ಅದು ಹೇಗೆ ಸಾಧ್ಯ? ಚಂದನ್ ಗೆ ತಾವೇ ವಿನ್ನರ್ ಎಂದು ಘೋಷಿಸಿಕೊಂಡರು? ಇದು ನಿವೇದಿತಾ ಮತ್ತು ಚಂದನ್ ನಡುವೆ ಗಾರ್ಡನ್ ಏರಿಯಾದಲ್ಲಿ ನಡೆಸಿದ ಸಂಭಾಷಣೆಯಲ್ಲಿ ಹೇಳಿಕೊಂಡಿರುವುದು.

ಫೈನಲ್ ನಲ್ಲಿ ಯಾರು ಬಿಗ್ ಬಾಸ್ ವಿನ್ ಎಂದು ಘೋಷಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ನಾನಂತೂ ಈಗಾಗಲೇ ಲೈಫ್ ನಲ್ಲಿ ವಿನ್ ಆಗಿದ್ದೀನಿ. ನನ್ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇನ್ನು ನಾನು ಎಲ್ಲೇ ಹೋದರೂ ಬದುಕುತ್ತೇನೆ. ಈ ವಾರವೂ ಕಳೆದರೆ ನಾನು ಬಂದ ಉದ್ದೇಶ ಪೂರ್ಣವಾಗುತ್ತದೆ. ನಾನು ಈಗಾಗಲೇ ವಿನ್ ಆಗಿದ್ದೀನಿ ಎಂದು ಚಂದನ್ ಶೆಟ್ಟಿ ನಗುತ್ತಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಾಖಿ ಸಾವಂತ್ ಗೆ ಎದುರಾದ ಸಂಕಷ್ಟವಾದರು ಏನು?