Select Your Language

Notifications

webdunia
webdunia
webdunia
webdunia

ಕೊನೆಗೂ ತೆರೆ ಮೇಲೆ ಕುಣಿದೇ ಬಿಟ್ಟ ಭಾಗ್ಯ: ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದ ಸುಷ್ಮಾ ರಾವ್

ಕೊನೆಗೂ ತೆರೆ ಮೇಲೆ ಕುಣಿದೇ ಬಿಟ್ಟ ಭಾಗ್ಯ: ಮತ್ತೆ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದ ಸುಷ್ಮಾ ರಾವ್
ಬೆಂಗಳೂರು , ಭಾನುವಾರ, 10 ಡಿಸೆಂಬರ್ 2023 (13:56 IST)
Photo Courtesy: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯ ಲಕ್ಷ್ಮಿ ಧಾರವಾಹಿಯ ನಾಯಕಿ ಭಾಗ್ಯ ಅಲಿಯಾಸ್ ನಟಿ ಸುಷ್ಮಾ ರಾವ್ ಮತ್ತೆ ಗೆಜ್ಜೆ ಕಟ್ಟಿ ಕುಣಿಯಲು ಸಜ್ಜಾಗಿದ್ದಾರೆ.

ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಈಗ ಶಾಲೆಯಲ್ಲಿ ಭಾಗ್ಯ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಭಾಗ್ಯಗೆ ಎಷ್ಟೇ ಅಡೆತಡೆ ಇದ್ದರೂ ಕೊನೆಗೆ ವೇದಿಕೆಯಲ್ಲಿ ಕುಣಿದು ತನ್ನ ಅತ್ತೆಗೆ ಹೆಮ್ಮೆ ತರುತ್ತಿರುವುದು ಮಾತ್ರವಲ್ಲದೆ, ಆಕೆಯ ಸೋಲನ್ನು ನೋಡಲು ಬಯಸುತ್ತಿದ್ದವರಿಗೆ ತಕ್ಕ ಎದಿರೇಟು ಕೊಡಲಿದ್ದಾರೆ.

ಕಳೆದ ಒಂದು ವಾರದಿಂದ ಭಾಗ್ಯ ಕುಣಿಯುತ್ತಾರಾ ಎಂಬುದೇ ಎಲ್ಲರ ಕುತೂಹಲವಾಗಿತ್ತು. ಆದರೆ ಇದೀಗ ಭಾಗ್ಯ ಗೆಜ್ಜೆ ಕಟ್ಟಿ ಭರತನಾಟ್ಯ ಮಾಡಲು ಸಜ್ಜಾಗಿದ್ದಾರೆ.

ಎಲ್ಲರಿಗೂ ಗೊತ್ತಿರುವ ಹಾಗೆ ನಟಿ ಸುಷ್ಮಾ ಮೂಲತಃ ಭರತನಾಟ್ಯ ಕಲಾವಿದೆ. ಆಕೆ ಮತ್ತೆ ಭರತನಾಟ್ಯ ಮಾಡುವುದನ್ನು ನೋಡಲು ಎಷ್ಟೋ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಕಾರಣಕ್ಕೆ ಈಗ ಭಾಗ್ಯಲಕ್ಷ್ಮಿ ಧಾರವಾಹಿ ನೋಡುವವರ ಸಂಖ್ಯೆ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ಲೋಬಲ್ ಸ್ಟಾರ್ ಆಗಲು ಹೊರಟಿರುವ ರಾಕಿ ಭಾಯಿ ಯಶ್