Select Your Language

Notifications

webdunia
webdunia
webdunia
webdunia

ಪ್ರೊ ಕುಸ್ತಿ ಲೀಗ್ ಪ್ರೇಕ್ಷಕರಿಗೆ ದಂಗಲ್ ಸಿನಿಮಾ ಪ್ರೇರಣೆ!

ಪ್ರೊ ಕುಸ್ತಿ ಲೀಗ್ ಪ್ರೇಕ್ಷಕರಿಗೆ ದಂಗಲ್ ಸಿನಿಮಾ ಪ್ರೇರಣೆ!
NewDelhi , ಸೋಮವಾರ, 2 ಜನವರಿ 2017 (09:26 IST)
ನವದೆಹಲಿ: ಒಂದು ಸಿನಿಮಾ ಹೇಗೆ ಜನರ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಇಂದಿನಿಂದ ದೆಹಲಿಯಲ್ಲಿ ಪ್ರೊ ಕುಸ್ತಿ ಲೀಗ್ ನ ಎರಡನೇ ಆವೃತ್ತಿ ಪ್ರಾರಂಭವಾಗಲಿದೆ. ಅದಕ್ಕೆ ಹಿಂದೆಗಿಂತ ಹೆಚ್ಚು ಜನ ಕ್ರೀಡಾಂಗಣಕ್ಕೆ ಬರುವ ನಿರೀಕ್ಷೆಯಿದೆ.


15 ಕೋಟಿ ರೂ. ಪ್ರಶಸ್ತಿ ಮೊತ್ತದ ಕುಸ್ತಿ ಲೀಗ್ ಜನವರಿ 19 ರವರೆಗೆ ನಡೆಯಲಿದೆ. ಇದರಲ್ಲಿ ಗೆಲ್ಲುವವರು ಯಾರು ಸೋಲುವವರು ಯಾರು ಎಂಬುದು ಮತ್ತಿನ ಪ್ರಶ್ನೆ. ಆದರೆ ಜನ ಈ ಬಾರಿ ಕಳೆದ ಆವೃತ್ತಿಗಿಂತ ಹೆಚ್ಚು ಕುಸ್ತಿ ನೋಡುವುದಕ್ಕೆ ಉತ್ಸುಕರಾಗಿದ್ದಾರೆ.

ಇದೆಲ್ಲಾ ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾದ ಪ್ರೇರಣೆ. ಈ ಸಿನಿಮಾ ತನ್ನಿಬ್ಬರು ಹೆಣ್ಣು ಮಕ್ಕಳನ್ನು ಕುಸ್ತಿ ಪಟುಗಳಾಗಿ ಮಾಡುವ ಮಹಾವೀರ್ ಸಿಂಗ್ ಎಂಬ ಕತಾ ಪಾತ್ರದ ಸುತ್ತ ತಿರುಗುವ ಕತೆ. ಈ ಚಿತ್ರ ಈಗಾಗಲೇ ಸೂಪರ್ ಹಿಟ್ ಆಗಿದೆ. ಇದೀಗ ಇದೇ ಪ್ರೇರಣೆಯಿಂದ ಜನ ಕ್ರೀಡಾಂಗಣದತ್ತ ನುಗ್ಗಿ ಬರುವ ನಿರೀಕ್ಷೆಯಿದೆ ಎಂದು ಸಂಘಟಕರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಡ್ಮಿಂಟನ್ ಲೀಗ್ ನ ಮೊದಲ ಪಂದ್ಯದಲ್ಲೇ ಪಿವಿ ಸಿಂಧುಗೆ ತಿರುಗೇಟು ಕೊಟ್ಟ ಕೆರೊಲಿನಾ ಮಾರಿನ್