Select Your Language

Notifications

webdunia
webdunia
webdunia
webdunia

ಏಷ್ಯನ್ ಗೇಮ್ಸ್: ಭಾರತಕ್ಕೆ ನಾಳನೇ ಚಿನ್ನ ಗೆದ್ದುಕೊಟ್ಟ ಮಹಿಳಾ ಶೂಟರ್ ಗಳು

ಏಷ್ಯನ್ ಗೇಮ್ಸ್: ಭಾರತಕ್ಕೆ ನಾಳನೇ ಚಿನ್ನ ಗೆದ್ದುಕೊಟ್ಟ ಮಹಿಳಾ ಶೂಟರ್ ಗಳು
ಹ್ಯಾಂಗ್ ಝೂ , ಬುಧವಾರ, 27 ಸೆಪ್ಟಂಬರ್ 2023 (09:27 IST)
Photo Courtesy: Twitter
ಹ್ಯಾಂಗ್ ಝೂ: 19 ನೇ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಇಂದು ಮಹಿಳಾ ಶೂಟರ್ ಗಳು ನಾಲ್ಕನೆಯ ಚಿನ್ನ ಗೆದ್ದುಕೊಟ್ಟಿದ್ದಾರೆ.
 

ಮಹಿಳೆಯರ ಗ್ರೂಪ್ ಈವೆಂಟ್ ನಲ್ಲಿ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಭಾರತದ ಮನು ಭಾಕರ್, ಇಶಾ ಸಿಂಗ್, ರಿದಂ ಸಾಂಘ್ವಾನ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಇಂದು ಮತ್ತಷ್ಟು ಪದಕದ ನಿರೀಕ್ಷೆ ಹೊತ್ತು ಭಾರತೀಯರು ಕಣಕ್ಕಿಳಿಯುತ್ತಿದ್ದಾರೆ. ಮಹಿಳೆಯರ ಹಾಕಿ ತಂಡ ಇಂದು ಅಭಿಯಾನ ಆರಂಭಿಸಲಿದೆ. ಬಾಕ್ಸಿಂಗ್ ನಲ್ಲಿ ನಿಖತ್ ಝರೀನ್, 60 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಖಚಿತಪಡಿಸಿರುವ ರೊಶಿಬಿನಾ ದೇವಿ ಇಂದು ಕಣಕ್ಕಿಳಿಯಲಿದ್ದಾರೆ. ಇದುವರೆಗೆ ಭಾರತ ಒಟ್ಟು 4 ಚಿನ್ನ, 5 ರಜತ ಮತ್ತು 7 ಕಂಚಿನ ಪದಕ ಗೆದ್ದುಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ಸ್ಥಾನಕ್ಕಾಗಿ ಟೀಂ ಇಂಡಿಯಾದಲ್ಲಿ ಮೂವರ ಪೈಪೋಟಿ