Select Your Language

Notifications

webdunia
webdunia
webdunia
webdunia

ವೀಕೆಂಡ್ ಸ್ಪೆಷಲ್ ಚಿಕನ್ ಟಿಕ್ಕಾ: ಮನೆಯಲ್ಲೇ ಹೀಗೇ ತಯಾರಿಸಿ

ವೀಕೆಂಡ್ ಸ್ಪೆಷಲ್ ಚಿಕನ್ ಟಿಕ್ಕಾ: ಮನೆಯಲ್ಲೇ ಹೀಗೇ ತಯಾರಿಸಿ

Sampriya

ಬೆಂಗಳೂರು , ಶನಿವಾರ, 16 ಮಾರ್ಚ್ 2024 (13:48 IST)
ಬೆಂಗಳೂರು: ವೀಕೆಂಡ್‌ನಲ್ಲಿ ವಿಶೇಷ ಖಾದ್ಯ ತಯಾರಿಸುವುದೇ ಮನೆ ಒಡತಿಗೆ ಯೋಚನೆಯಾಗಿರುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರೆಗಿನ ಹೊಟ್ಟೆಯನ್ನು ಹೇಗೆ ಖುಷಿ ಪಡಿಸುವುದು ಎಂಬುದು ಆಕೆ ಪ್ಲ್ಯಾನ್ ಮಾಡಿಕೊಳ್ಳುತ್ತಿರುತ್ತಾಳೆ. 
 
ಮನೆಯಲ್ಲಿಯೇ ಹೊಟೇಲ್ ರೀತಿಯ ಖಾದ್ಯವನ್ನು ತಯಾರಿಸಲು ಯೋಚಿಸಿದರೆ, ಕೆಲವೊಂದು ಐಟಂಗಳು ಖರೀದಿಸಲು ದುಬಾರಿ ಆಗುತ್ತದೆ. ಒಂದು ಬಾರಿ ಮಾಡಲು ಇಷ್ಟೊಂದು ಹಣ ಖರ್ಚು ಮಾಡಬೇಕಾ ಎಂಬ ಯೋಚನೆ ಬರುತ್ತದೆ.  ಅದಲ್ಲದೆ ಹೊಟೇಲ್‌ಗೆ ಹೋಗಿ ಸವಿದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ ಎಂಬ ಭಯವಿರುತ್ತದೆ. ಅಂತವರಿಗೆ ಸಿಂಪಲ್ ಆಗಿ ಮನೆಯಲ್ಲೇ ಇರುವ ಸಾಮಾಗ್ರಿಗಳನ್ನು ಬಳಸಿಕೊಂಡು ಚಿಕನ್ ಟಿಕ್ಕಾವನ್ನು ಮಾಡಿ ಸವಿಯವಹದು. 
 
ಮಾಡಲು ಬೇಕಾಗುವ ಸಾಮಾಗ್ರಿಗಳು: 
 
ಚಿಕನ್ 250 ಗ್ರಾಂ
ಗಟ್ಟಿ ಮೊಸರು 3 ಚಮಚ
ಮೆಣಸಿನ ಪುಡಿ: ಖಾರ ಬೇಕಾಗುವಷ್ಟು
ಉಪ್ಪು: ರುಚಿಗೆ ತಕ್ಕಷ್ಟು
ಗರಂ ಮಸಾಲ 1/4 ಚಮಚ
ಶುಂಠಿ- ಬೆಳ್ಳುಳ್ಳಿ ಪೇಸ್ಟ್‌  1 ಚಮಚ
ನಿಂಬೆ  ರಸ  ಸ್ವಲ್ಪ
 
ಮಾಡುವ ವಿಧಾನ: ಮೊದಲಿಗೆ ಮೊಸರು, ಖಾರದ ಪುಡಿ, ರುಚಿಗೆ ಬೇಕಾಗುವಷ್ಟು ಉಪ್ಪು, ಗರಂ ಮಸಾಲ ಪುಡಿ ಸ್ವಲ್ಪ, ಶುಂಠಿ ಬೆಳ್ಳುಳ್ಳಿ ಫೇಸ್ಟ್‌, ನಿಂಬೆ ರಸವನ್ನು ಸೇರಿ ಪೇಸ್ಟ್‌ ರೀತಿ ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ  ಸ್ವಚ್ಛ ಮಾಡಿಕೊಂಡ ಚಿಕನ್‌ ಅನ್ನು ಸೇರಸಿ 1 ಗಂಟೆ ಕಾಲ ನೆನೆಸಿಡಿ. 
 
ನಂತರ ಕಾದ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಮಿಶ್ರಣ ಮಾಡಿದ ಚಿಕನ್ ಅನ್ನು ಹದ ಉರಿಯಲ್ಲಿ ಬೇಯಿಸಿ. ಇದೀಗ ರುಚಿಕರವಾದ ಹೊಟೇಲ್ ಸ್ಟೈಲ್‌ನ ಚಿಕನ್ ಟಿಕ್ಕ ಸವಿಯಲು ಸಿದ್ಧ. ಈ ಖಾದ್ಯ ಮಕ್ಕಳಿಂದ ಹಿಡಿದು ಹಿರಿಯವರಿಗೂ ಇಷ್ಟ ಪಡುತ್ತಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾದಾಮಿ ಎಣ್ಣೆಯಿಂದ ಬಾಡಿ ಮಸಾಜ್ ಮಾಡಿದರೆ ಪ್ರಯೋಜನಗಳು