Select Your Language

Notifications

webdunia
webdunia
webdunia
webdunia

ಮಾವಿನ ಹಣ್ಣಿನ ಪಲ್ಯ..

ಮಾವಿನ ಹಣ್ಣಿನ ಪಲ್ಯ..
ಬೆಂಗಳೂರು , ಗುರುವಾರ, 21 ಫೆಬ್ರವರಿ 2019 (15:28 IST)
ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಬಗೆಬಗೆಯ ಮಾವಿನ ಹಣ್ಣುಗಳು ದೊರೆಯುತ್ತವೆ. ಮಾವಿನ ಹಣ್ಣುಗಳು ಹಾಗೆಯೇ ತಿನ್ನಲು ಎಷ್ಟು ರುಚಿಯೋ ಹಾಗೆಯೇ ಅದರ ಪದಾರ್ಥಗಳೂ ರುಚಿಯಾಗಿರುತ್ತವೆ. ಮಾವಿನ ಹಣ್ಣಿನ ಪಲ್ಯ ಅಥವಾ ಗ್ರೇವಿಯನ್ನು ಮಾಡಲು ನಿಮಗೆ ಸ್ವಲ್ಪ ಹುಳಿ-ಸಿಹಿ ಮಿಶ್ರವಾಗಿರುವ ಚಿಕ್ಕ-ಚಿಕ್ಕ ಹಣ್ಣುಗಳು ಅಗತ್ಯವಿರುತ್ತವೆ. ಈ ಪಲ್ಯವನ್ನು ನಿಮ್ಮ ರುಚಿಗೆ ಅನುಸಾರವಾಗಿ ನೀವು ಸಿಹಿ, ಖಾರ, ಹುಳಿಯಾಗಿ ತಯಾರಿಸಿಕೊಳ್ಳಬಹುದಾಗಿದೆ.
ಬೇಕಾಗುವ ಸಾಮಗ್ರಿಗಳು:
ಮಾವಿನ ಹಣ್ಣು (ಸಣ್ಣ ಗಾತ್ರದ್ದು) - 8-10
ಎಣ್ಣೆ - 2 ಚಮಚ
ಸಾಸಿವೆ - 1 ಚಮಚ
ಉದ್ದಿನಬೇಳೆ - 1 ಚಮಚ
ಕೆಂಪು ಮೆಣಸು - 1
ಹಸಿಮೆಣಸು - 1
ಕರಿಬೇವು - ಸ್ವಲ್ಪ
ಇಂಗು - 1/2
ಅರಿಶಿಣ - 1/2 ಚಮಚ
ಉಪ್ಪು - ರುಚಿಗೆ
ಬೆಲ್ಲ - 1/2 ಕಪ್
 
ಮಾಡುವ ವಿಧಾನ:
ಸ್ವಲ್ಪ ಹುಳಿ-ಸಿಹಿಯಿರುವ ಚಿಕ್ಕ ಚಿಕ್ಕ ಮಾವಿನ ಹಣ್ಣುಗಳನ್ನು ತೆಗೆದುಕೊಂಡು ತೊಳೆದುಕೊಳ್ಳಿ. ನಂತರ ಅವುಗಳ ತೊಟ್ಟಿನ ಭಾಗವನ್ನು ಕತ್ತರಿಸಿ. ಈಗ ಹಣ್ಣುಗಳನ್ನು ನಾಲ್ಕು ಮೂಲೆಯಲ್ಲಿ ಸಿಗಿದು ಅರ್ಧ-ಅರ್ಧ ಬಿಡಿಸಿಡಿ. ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಸ್ವಲ್ಪ ಬಿಸಿಯಾದ ನಂತರ 2 ಚಮಚ ಎಣ್ಣೆ ಹಾಕಿ. ನಂತರ 1 ಚಮಚ ಸಾಸಿವೆ ಹಾಕಿ ಅದು ಸಿಡಿಯಲು ಆರಂಭವಾದಾಗ 1 ಚಮಚ ಉದ್ದಿನಬೇಳೆ, 1 ಕತ್ತರಿಸಿದ ಕೆಂಪು ಮೆಣಸು, 1/2 ಚಮಚ ಇಂಗು, ಕರಿಬೇವಿನ ಎಲೆಯನ್ನು ಹಾಕಿ 1 ಹುರಿಯಿರಿ.

ಈಗ ಅದಕ್ಕೆ 1/2 ಚಮಚ ಅರಿಶಿಣ, 1 ಕತ್ತರಿಸಿದ ಹಸಿಮೆಣಸನ್ನು ಹಾಕಿ ಇನ್ನೂ ಸ್ವಲ್ಪ ಹುರಿದು ನಂತರ ಇದಕ್ಕೆ 1 ಕಪ್ ನೀರನ್ನು ಹಾಕಿ. ನಂತರ 1/2 ಕಪ್ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಬೆಲ್ಲ ಕರಗುವವರೆಗೆ ಕುದಿಸಿ. 2-3 ನಿಮಿಷಗಳ ನಂತರ ಅರ್ಧ ಸಿಪ್ಪೆ ಸುಲಿದ ಮಾವಿನ ಹಣ್ಣುಗಳನ್ನು ಈ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮಧ್ಯಮ ಉರಿಯಲ್ಲಿ ಬೇಯಿಸಿದರೆ ರುಚಿಯಾದ ಮಾವಿನ ಹಣ್ಣಿನ ಪಲ್ಯ ಅಥವಾ ಗ್ರೇವಿ ಸಿದ್ಧವಾಗುತ್ತದೆ. ನೀವು ಇದನ್ನು ಅನ್ನ, ಚಪಾತಿ ಅಥವಾ ದೋಸೆಯೊಂದಿಗೆ ಸೇವಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾವಿನ ಹಣ್ಣಿ ಹಪ್ಪಳ..