Select Your Language

Notifications

webdunia
webdunia
webdunia
webdunia

ರುಚಿ ರುಚಿಯಾದ ಅಡುಗೆ: ಚಾಕ್ಲೇಟ್, ಹಲ್ವಾ ಮಾಡುವ ವಿಧಾನ ಇಲ್ಲಿದೆ ನೋಡಿ

ರುಚಿ ರುಚಿಯಾದ ಅಡುಗೆ: ಚಾಕ್ಲೇಟ್, ಹಲ್ವಾ ಮಾಡುವ ವಿಧಾನ ಇಲ್ಲಿದೆ ನೋಡಿ
ಬೆಂಗಳೂರು , ಮಂಗಳವಾರ, 15 ಜನವರಿ 2019 (12:27 IST)
ರುಚಿಯಾದ ಅಡುಗೆ ಮಾಡುವುದು ಕೂಡ ಒಂದು ಕಲೆ. ಹೋಟೆಲ್ ನಲ್ಲಿ ಹೋಗಿ ತಿಂದುಂಡು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ, ಆರೋಗ್ಯಕರವಾದ ಅಡುಗೆ ಮಾಡಿಕೊಂಡು ತಿಂದರೆ  ನಮ್ಮ ಆರೋಗ್ಯವು ಚೆನ್ನಾಗಿರುತ್ತೆ. ಮಕ್ಕಳಿಗೆ ಇಷ್ಟವಾಗುವ ಚಾಕ್ಲೆಟ್ ಹಾಗೂ ಹಲ್ವಾ ಜತೆಗೆ ಗೋಡಂಬಿ ಬಾತ್ ಮಾಡುವ ವಿಧಾನ ಇಲ್ಲಿದೆ ನೋಡಿ.

ಮಿಲ್ಕ್ ಪೌಡರ್ ಚಾಕೋಲೆಟ್



-ಎಸ್.ವಿ. ಶೆಟ್ಟಿ 
webdunia

 




ಬೇಕಾಗುವ ಸಾಮಾಗ್ರಿಗಳು
1ಕಪ್- ಮಿಲ್ಕ್ ಪೌಡರ್, ಮುಕ್ಕಾಲು ಕಪ್- ಶುಗರ್, 50ಗ್ರಾಮ್ಸ್- ಬಟರ್, 2tea ಸ್ಪೂನ್- ಕೋ ಕೋ ಪೌಡರ್ ,ಕಾಲು ಕಪ್ ನೀರು. 
 
ಮಾಡುವ ವಿಧಾನ
ಮೊದಲಿಗೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಅನ್ನು ಜರಡಿ ಹಿಡಿದಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ನೀರು, ಸಕ್ಕರೆ ಹಾಕಿ. ಎಳೆ ಪಾಕ ಬಂದಾಗ ಬೆಣ್ಣೆ ಹಾಕಿ. ಅದು ನೀರಾದ ಮೇಲೆ ಮಿಲ್ಕ್ ಪೌಡರ್ ಹಾಗೂ ಕೋ ಕೋ ಪೌಡರ್ ಹಾಕಿ ಚೆನ್ನಾಗಿ ಚಮಚದಿಂದ ಕೈ ಆಡಿಸಿ. ಈ ಮಿಶ್ರಣ  ಸ್ವಲ್ಪ ಗಟ್ಟಿಯಾಗುವ ಹಂತ ತಲುಪಿದಾಗ ಒಂದು ತಟ್ಟೆ ಗೆ ಹಾಕಿ. ತಣ್ಣಗಾದ ನಂತರ ಬೇಕಾದ ಆಕಾರಕ್ಕೆ ಕಟ್ ಮಾಡಿ. ಮೇಲೆ ಅಲಂಕರಿಸಲು. ಬಾದಾಮಿ, ಪಿಸ್ತಾ, ಗೋಡಂಬಿ ಉಪಯೋಗಿಸಬಹುದು.
 
ಬಾಳೆಹಣ್ಣಿನ ಹಲ್ವಾ
webdunia
ಅರ್ಧ ಕೆಜಿ ಚೆನ್ನಾಗಿ ಕಳಿತ ಬಾಳೆ ಹಣ್ಣು, ಅರ್ಧ ಕೆಜಿ ಸಕ್ಕರೆ. ಅರ್ಧ ಕಪ್. ಹಾಲು. (ನೀರು ಹಾಕದ ದಪ್ಪಹಾಲು ) 1ಕಪ್ ತುಪ್ಪ, ಏಲಕ್ಕಿ ಪುಡಿ ಸ್ವಲ್ಪ, ಬಾಳೆಹಣ್ಣು ಹಸಿರು ಹಳದಿ ಯಾವುದಾದರೂ ಆಗುತ್ತೆ. 
 
ಮಾಡುವ ವಿಧಾನ
ಬಾಳೆ ಹಣ್ಣಿನ ಸಿಪ್ಪೆ ತೆಗೆದು ಚಿಪ್ಸ್ ಹಾಗೆ ಕಟ್ ಮಾಡಿ. ನಂತರ  ಮಿಕ್ಸಿಗೆ ಹಾಲು, ಬಾಳೆ ಹಣ್ಣು ಪೀಸ್ ಹಾಕಿ ಸ್ವಲ್ಪ ತಿರುಗಿಸಿ .ಒಂದು ಬಾಣಲೆಗೆ ಯನ್ನು ಗ್ಯಾಸ್ ಮೇಲೆ ಇಟ್ಟು ಗ್ಯಾಸ್ ಹೊತ್ತಿಸಿ. ಅದಕ್ಕೆ ಹಾಲು ಹಾಕಿದ ಬಾಳೆಹಣ್ಣು ಮಿಶ್ರಣ ಹಾಕಿ. ಸಕ್ಕರೆ ಹಾಕಿ. ಬೆಂಕಿಯ ಉರಿ ಜಾಸ್ತಿ ಇರಲಿ. ಈ ಮಿಶ್ರಣ ಕುದಿ ಬೇಕು.. ಅರ್ಧ ಬೆಂದ ನಂತರ.(ಅರ್ಧ ಗಂಟೆ ನಂತರ )ತುಪ್ಪಹಾಕಿ. ಬೇಯಿಸಿ. ಗಟ್ಟಿ ಯಾಗುವವರೇ ದೊಡ್ಡ ಚಮಚ ದಿಂದ. ಕೈ ಆಡಿಸುತ್ತಾ ಇರಿ. ನಂತರ ಏಲಕ್ಕಿ ಪುಡಿ ಹಾಕಿ.  ಬಾಣಲೆಯಿಂದ ಪಾಕ ಬಿಡುತ್ತಾ ಬರುತ್ತೆ (ಗಟ್ಟಿ ಯಾದಾಗ ). ಈ ಮಿಶ್ರಣವನ್ನು ತುಪ್ಪ ಸವರಿದ. ಅಗಲ ಪ್ಲೇಟ್ ಗೆ ಹಾಕಿ ತಣ್ಣಗಾದ ನಂತರ ಕಟ್ ಮಾಡಿ.
 
ಗೋಡಂಬಿ ಬಾತ್ 
webdunia
ಬೇಕಾಗುವ ಸಾಮಾಗ್ರಿಗಳು:
1ಕಪ್ ಚಿರೋಟಿ, (ಬಾಂಬೆ. ರವಾ )ರವಾ. ಅರ್ಧಕ್ಕಿಂತ ಸ್ವಲ್ಪ ಜಾಸ್ತಿ ತುಪ್ಪ, 100ಗ್ರಾಮ್ ಗೋಡಂಬಿ , 1ಟೀ ಸ್ಪೂನ್ ಸಾಂಬರ್ ಪೌಡರ್, 1 ದೊಡ್ಡ ಟೊಮೆಟೊ,  2ಹಸಿ ಮೆಣಸು, 1 ಚಕ್ಕೆ ಪೀಸ್,  2 ಲವಂಗ,  ಕಾಲು ಕಪ್ ಕೊತ್ತಂಬರಿ ಸೊಪ್ಪು , 2 ಹನಿ ಲೆಮನ್ ಜ್ಯೂಸ್ (ಬೇಕಾದ್ರೆ ಮಾತ್ರ ) ಬಿಸಿನೀರು, ಉಪ್ಪು ರುಚಿಗೆ ತಕ್ಕಷ್ಟು.
 
ಮಾಡುವ ವಿಧಾನ
ಮೊದಲು ಒಂದು ಬಾಣಲೆ ಗ್ಯಾಸ್ ಮೇಲೆ ಇಟ್ಟು ಗ್ಯಾಸ್ ಹೊತ್ತಿಸಿ. ಚಕ್ಕ, ಲವಂಗ ಹಾಕಿ, ಸ್ವಲ್ಪ ತುಪ್ಪ, ಗೋಡಂಬಿ ಹಾಕಿ. ಇದು ಗೋಲ್ಡನ್ ಕಲರ್ ಬರುವ ಹಾಗೆ ಹುರಿಯಿರಿ. ನಂತರ ರವೆ ಹಾಕಿ ಹುರಿದು ಬಾಣಲೆ ಕೆಳಕ್ಕೆ ಇಳಿಸಿ. ಇನ್ನೊಂದು ಬಾಣಲೆಯನ್ನು ಗ್ಯಾಸ್ ಮೇಲೆ ಇಟ್ಟು ಉಳಿದ ತುಪ್ಪ ಹಾಕಿ. ಬಿಸಿಯಾದ ಮೇಲೆ  ಕತ್ತರಿಸಿಟ್ಟುಕೊಂಡ ಹಸಿ ಮೆಣಸು, ಸಣ್ಣಗೆ ಹಚ್ಚಿಕೊಂಡ ಟೊಮೆಟೊ ಹಾಕಿ ಬೇಯಿಸಿ. ನಂತರ  ಸಾಂಬರ್ ಪೌಡರ್,  ಉಪ್ಪು ಹಾಕಿ.  ಟೊಮೆಟೊ ಚೆನ್ನಾಗಿ ಬೆಂದ ಮೇಲೆ  ಹುರಿದ ರವೆ, ಗೋಡಂಬಿ ಹಾಕಿ. ಬೇಕಾಗುವಷ್ಟು ನೀರುಹಾಕಿ. ಲೆಮನ್ ಜ್ಯೂಸು, ಕೊತಂಬರಿ ಸೊಪ್ಪು ಸೇರಿಸಿ ಮಗುಚಿ. ಇದಕ್ಕೆ ಉಪ್ಪಿಟ್ಟಿಗಿಂತ ಸ್ವಲ್ಪ ಜಾಸ್ತಿ ನೀರು ಬೇಕು. ವಿಶೇಷ ದಿನದಲ್ಲಿ. ಒಂದು ಸ್ವೀಟ್ ನೊಂದಿಗೆ ಚೆನ್ನಾಗಿರತ್ತೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮಕ್ಕಳ ಹೈಟ್ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ