Select Your Language

Notifications

webdunia
webdunia
webdunia
webdunia

ಸೌತೆಕಾಯಿಯ ಸ್ಯಾಂಡ್‌ವಿಚ್

ಸೌತೆಕಾಯಿಯ ಸ್ಯಾಂಡ್‌ವಿಚ್
ಬೆಂಗಳೂರು , ಶುಕ್ರವಾರ, 28 ಸೆಪ್ಟಂಬರ್ 2018 (15:20 IST)
ಸೌತೆಕಾಯಿಯಲ್ಲಿ ದೇಹಕ್ಕೆ ಬೇಕಾಗುವ ಒಳ್ಳೆಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ಆಹಾರ ಪದಾರ್ಥಗಳಲ್ಲಷ್ಟೇ ಅಲ್ಲದೇ ಫೇಸ್‌ಪ್ಯಾಕ್‌ಗಳಲ್ಲಿಯೂ ಬಳಕೆಯಾಗುತ್ತದೆ. ಸೌತೆಕಾಯಿಯಿಂದ ಸಲಾಡ್, ಸಾರು, ಜ್ಯೂಸ್ ಹೀಗೆ ಅನೇಕ ಭಕ್ಷ್ಯಗಳನ್ನು ತಯಾರಿಸುವುದಲ್ಲದೇ ಸ್ಯಾಂಡ್‌ವಿಚ್ ಅನ್ನೂ ಸಹ ಮಾಡಿ ಸವಿಯಬಹುದು. ಅದು ಹೇಗೆ ಅಂತಾ ನೀವೂ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು :
* ಬ್ರೆಡ್ ತುಂಡು 4 ರಿಂದ 6
* ಸೌತೆಕಾಯಿ 1
* ಸ್ವಲ್ಪ ಚೀಸ್
* ಬೆಣ್ಣೆ 2 ಚಮಚ
* ಚಿಟಿಕೆಯಷ್ಟು ಕರಿ ಮೆಣಸಿನ ಪುಡಿ
* ಚಿಟಿಕೆಯಷ್ಟು ಚಾಟ್ ಮಸಾಲಾ
* ರುಚಿಗೆ ತಕ್ಕಷ್ಟು ಉಪ್ಪು
 
ತಯಾರಿಸುವ ವಿಧಾನ :
 ಮೊದಲು ಸೌತೆಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು. ನಂತರ ಬ್ರೆಡ್‌ನ ತುದಿಯನ್ನು ಕತ್ತರಿಸಿ, ಅದಕ್ಕೆ ಬೆಣ್ಣೆಯನ್ನು ಸವರಬೇಕು. ನಂತರ ಚೀಸ್, ಸೌತೆಕಾಯಿ ಹಾಕಿ ಕರಿ ಮೆಣಸಿನ ಪುಡಿ, ಉಪ್ಪು, ಚಾಟ್ ಮಸಾಲಾ ಪುಡಿಯನ್ನು ಹಾಕಿ ಇನ್ನೊಂದು ಬ್ರೆಡ್‌ನಿಂದ ಕವರ್ ಮಾಡಬೇಕು. ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ ಬೆಣ್ಣೆ ಸವರಿ ಅದರ ಮೇಲೆ ಈ ಎಲ್ಲಾ ಮಿಶ್ರಣ ಮಾಡಿದ ಬ್ರೆಡ್ ಇಟ್ಟು ಎರಡೂ ಬದಿ ರೋಸ್ಟ್ ಮಾಡಿದರೆ ಸೌತೆಕಾಯಿಯ ಸ್ಯಾಂಡ್‌ವಿಚ್ ತಿನ್ನಲು ಸಿದ್ಧ. 

Share this Story:

Follow Webdunia kannada

ಮುಂದಿನ ಸುದ್ದಿ

ಗೋಧಿ ಮಣ್ಣಿ (ಹಾಲುಬಾಯಿ)