Select Your Language

Notifications

webdunia
webdunia
webdunia
webdunia

ಆರೋಗ್ಯಕ್ಕೂ ಸೈ, ರುಚಿಗೂ ಸೈ ಬಾಳೆಹಣ್ಣಿನ ಖೀರ್

ಆರೋಗ್ಯಕ್ಕೂ ಸೈ, ರುಚಿಗೂ ಸೈ ಬಾಳೆಹಣ್ಣಿನ ಖೀರ್
ಬೆಂಗಳೂರು , ಬುಧವಾರ, 2 ಆಗಸ್ಟ್ 2023 (09:41 IST)
ಇಂದು ಬಾಳೆಹಣ್ಣಿನ ಖೀರ್ ಯಾವ ರೀತಿ ತಯಾರಿಸಬಹುದು ಎಂಬುದರ ಕುರಿತು ನಾವು ನಿಮಗೆ ತಿಳಿಸಿಕೊಡುತ್ತೇವೆ. ಹಾಗಿದ್ರೆ ಬಾಳೆಹಣ್ಣಿನ ಖೀರ್ ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳೋಣ. 
 
ಬೇಕಾಗುವ ಸಾಮಗ್ರಿಗಳು

ಹಾಲು – 2 ಕಪ್
ಕಿವುಚಿದ ಬಾಳೆಹಣ್ಣು – 1 ಕಪ್
ಹೆಚ್ಚಿದ ಬಾಳೆಹಣ್ಣು – ಸ್ವಲ್ಪ
ಏಲಕ್ಕಿ ಪೌಡರ್ – ಅರ್ಧ ಚಮಚ
ಕೇಸರಿ – ಸ್ವಲ್ಪ
ಬೆಲ್ಲದ ಪೌಡರ್ – ರುಚಿಗೆ ತಕ್ಕಷ್ಟು
ಹೆಚ್ಚಿದ ನಟ್ಸ್ಗಳು (ನಿಮಗೆ ಇಷ್ಟವಾದದ್ದು) – ಅರ್ಧ ಕಪ್

ಮಾಡುವ ವಿಧಾನ

* ಮೊದಲಿಗೆ ಒಂದು ಪಾತ್ರೆಯಲ್ಲಿ ಹಾಲನ್ನು ಬಿಸಿಗಿಟ್ಟು ಕುದಿಸಿಕೊಳ್ಳಿ.
* ಬಳಿಕ ಇದಕ್ಕೆ ಕೇಸರಿ, ಏಲಕ್ಕಿ ಪೌಡರ್ ಮತ್ತು ಸಣ್ಣಗೆ ಹೆಚ್ಚಿದ ನಟ್ಸ್ಗಳನ್ನು ಸೇರಿಸಿಕೊಳ್ಳಿ.
* ನಂತರ ಕೇಸರಿ ಬಣ್ಣ ಬಿಡುವವರೆಗೂ ಗ್ಯಾಸ್ ಅನ್ನು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಬೇಕು.
* ಈಗ ಒಂದು ಬೌಲ್ನಲ್ಲಿ ಕಿವುಚಿದ ಬಾಳೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಕುದಿಸಿ, ನಟ್ಸ್ ಸೇರಿಸಿದ ಹಾಲನ್ನು ಹಾಕಿಕೊಳ್ಳಿ.
* ಈಗ ಹೆಚ್ಚಿದ ಬಾಳೆಹಣ್ಣಿನಿಂದ ಖೀರ್ ಅನ್ನು ಅಲಂಕರಿಸಿ ಮನೆಯವರಿಗೆ ಸವಿಯಲು ಕೊಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಅಲೋವೆರಾ – ಸೌಂದರ್ಯ ಮತ್ತು ಆರೋಗ್ಯ ಎರಡಕ್ಕೂ ಶಕ್ತಿ