Select Your Language

Notifications

webdunia
webdunia
webdunia
webdunia

ಭಾರತದ ನಂಬರ್ ವನ್ ಸಿಂಗಲ್ಸ್ ಆಟಗಾರ ಸೋಮದೇವ್

ಭಾರತದ ನಂಬರ್ ವನ್ ಸಿಂಗಲ್ಸ್ ಆಟಗಾರ ಸೋಮದೇವ್
ಸೋಮದೇವ್ ದೇವರ್‌ಮನ್ ಹುಟ್ಟಿದ್ದು ಅಸ್ಸಾಂನ ಗುವಾಹತಿಯಲ್ಲಿ. ಫೆಬ್ರವರಿ 13, 1985ರಲ್ಲಿ ಜನಿಸಿದ ಸೋಮದೇವ್ ಈಗ ಚೆನ್ನೈಯಲ್ಲಿ ವಾಸವಾಗಿದ್ದಾರೆ. ಅವರ ಅಡ್ಡ ಹೆಸರು ಬುಜಿ, ದೇವ್ ಎಂದು. ಇವರನ್ನು ಸೋಮದೇವ್ ದೇವ್ ವರ್ಮನ್ ಎಂದೂ ಕರೆಯಲಾಗುತ್ತದೆ.

ಇದೀಗ ಟೆನಿಸ್ ಸಿಂಗಲ್ಸ್ ವಿಭಾಗದಲ್ಲಿ ಭಾರತದಲ್ಲೇ ನಂಬರ್ ವನ್ ಸ್ಥಾನಕ್ಕೇರಿರುವ ಸೋಮದೇವ್ ಅಂತಾರಾಷ್ಟ್ರೀಯ ಟೆನಿಸ್‌ಗೆ ಪದಾರ್ಪಣೆ ಮಾಡಿದ 2008ರಲ್ಲೇ ಉತ್ತಮ ಸಾಧನೆ ತೋರಿಸಿದ್ದಾರೆ. ಹಲವಾರು ಸಿಂಗಲ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಟೆನಿಸ್ ಪ್ರಿಯರ ಗಮನ ಸೆಳೆದವರಾಗಿದ್ದಾರೆ ಸೋಮದೇವ್. ತನ್ನ ಕ್ರೀಡಾಜೀವನದ ಅತ್ಯುತ್ತಮ ಸಾಧನೆಯಿಂದ ಟೆನಿಸ್ ರ‌್ಯಾಂಕಿಂಗ್‌ನಲ್ಲಿ 201ನೇ ಸ್ಥಾನಕ್ಕೆ ಬಂದಿದ್ದು, ಆ ಮ‌ೂಲಕ ಭಾರತದ ನಂಬರ್ 1 ಸಿಂಗಲ್ಸ್ ಆಟಗಾರ ಎನಿಸಿಕೊಂಡಿದ್ದಾರೆ. ಡಬಲ್ಸ್ ವಿಭಾಗದಲ್ಲಿ ಇವರು 574ನೇ ಸ್ಥಾನ ಇವರದ್ದಾಗಿದೆ.

PR
ಇತ್ತೀಚಿನ ನಾಶ್‌ವಿಲ್ಲೆ ಚಾಲೆಂಜರ್‌ನಲ್ಲಿ ಸೋಮದೇವ್ ಹಲವು ಟಾಪ್ 100ರೊಳಗಿನ ಆಟಗಾರರನ್ನು ಮಣಿಸಿದ್ದರಿಂದ ರ‌್ಯಾಂಕಿಂಗ್‌ನಲ್ಲಿ ಸುಮಾರು 40ರಷ್ಟು ಮೇಲೇರಿ ಎಲ್ಲರೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಈ ನಾಶ್‌ವಿಲ್ಲೆ ಚಾಲೆಂಜರ್‌ನ ಫೈನಲ್‌ನಲ್ಲಿ ಸೋಮದೇವ್ ಅವರು ರಾಬರ್ಟ್ ಕೆಂಡ್ರಿಕ್ ಎದುರು ಪರಾಭವ ಅನುಭವಿಸಿದ್ದರೂ ಕೂಡ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೇಲೇರಿದ್ದರು.

2007 ಮತ್ತು 2008ರಲ್ಲಿ ನ್ಯಾಷನಲ್ ಕಾಲೇಜಿಯೇಟ್ ಅಥ್ಲೆಟಿಕ್ ಅಸೋಸಿಯೇಷನ್‌ನಲ್ಲಿ ಅಗ್ರ ರ‌್ಯಾಂಕಿಂಗ್ ಇವರ ಪಾಲಾಗಿತ್ತು. ತನ್ನ ಕಾಲೇಜಿನ ದಿನಗಳಲ್ಲೇ ಅತ್ಯುತ್ತಮ ಟೆನಿಸ್ ಆಟಗಾರನಾಗಿದ್ದ ಸೋಮದೇವ್ ಮುಂದೆ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೇಲೇರುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಭಾರತದ ಕೀರ್ತಿ ಪತಾಕೆಯನ್ನು ಡಬಲ್ಸ್ ವಿಭಾಗದಲ್ಲಿ ಮಹೇಶ್ ಭೂಪತಿ ಮತ್ತು ಲಿಯಾಂಡರ್ ಪೇಸ್ ಎತ್ತರಕ್ಕೇರಿಸಿದರೆ, ಸಿಂಗಲ್ಸ್ ವಿಭಾಗದಲ್ಲಿ ಸೋಮದೇವ್ ಆ ಕೆಲಸ ಮಾಡುತ್ತಿದ್ದಾರೆ. ಅವರ ಕಠಿಣ ಪರಿಶ್ರಮವನ್ನು ಕಂಡಾಗ ವಿಶ್ವದ ಬಲಾಢ್ಯ ಆಟಗಾರರ ಜತೆ ಆಡುವ ಅವಕಾಶವನ್ನೂ ಶೀಘ್ರದಲ್ಲೇ ಪಡೆದುಕೊಳ್ಳಬಹುದು.

Share this Story:

Follow Webdunia kannada