Select Your Language

Notifications

webdunia
webdunia
webdunia
webdunia

ಸ್ವಾದಿಷ್ಠ ಮಲಬಾರ್ ಏಡಿ ಕರಿ

ಸ್ವಾದಿಷ್ಠ ಮಲಬಾರ್ ಏಡಿ ಕರಿ

ಅತಿಥಾ

ಬೆಂಗಳೂರು , ಮಂಗಳವಾರ, 2 ಜನವರಿ 2018 (16:36 IST)
ಮಲೆನಾಡಿನ ನದಿಗಳಲ್ಲಿ ಮತ್ತು ಕರಾವಳಿ ತೀರಗಳಲ್ಲಿ ಹೆಚ್ಚಾಗಿ ಕಂಡುಬರುವ ಏಡಿಯು ತುಂಬಾ ರುಚಿಕರವಾಗಿದ್ದು ಹಾಗೂ ಇದರಲ್ಲಿ ಹೆಚ್ಚಾಗಿ ಕ್ಯಾಲ್ಶಿಯಂ ಅಂಶ ಇರುವುದರಿಂದ ಆರೋಗ್ಯಕ್ಕೂ ಇದು ತುಂಬಾನೇ ಒಳ್ಳೆಯದು.

ಇದನ್ನು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಸೇವಿಸುತ್ತಾರೆ. ಇದರ ಮೇಲ್ಭಾಗವು ಸ್ವಲ್ಪ ಗಟ್ಟಿಯಾಗಿದ್ದು ಇದರ ಮಾಂಸವು ತುಂಬಾ ರುಚಿಕರವಾಗಿರುತ್ತದೆ. ಇದನ್ನು ಬಳಸಿ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದು. ನೀವು ಇದನ್ನು ಹೊಟೇಲ್‌ಗಳಲ್ಲಿ ತಿನ್ನಲು ಹೋದರೆ ಇದು ತುಂಬಾ ದುಬಾರಿಯಾಗಿರುತ್ತದೆ ಹಾಗಾಗಿ ಇದನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು ಹೇಗೆ ಅಂತಾ ನಾವು ತಿಳಿಸಿಕೊಡ್ತಿವಿ.
 
ಮಲಬಾರ್ ಏಡಿ ಕರಿ
 
ಬೇಕಾಗುವ ಸಾಮಗ್ರಿಗಳು--
 
ಏಡಿಗಳು - 4, ಮಧ್ಯಮ ಗಾತ್ರ, ಸ್ವಚ್ಛಗೊಳಿಸಿರುವುದು
ತೆಂಗಿನ ಎಣ್ಣೆ - 2 ಚಮಚ
ಈರುಳ್ಳಿ - 1 ಹೆಚ್ಚಿದ್ದು
ಟೊಮೆಟೊ - 1 ಹೆಚ್ಚಿದ್ದು
ಶುಂಠಿ - ಚಿಕ್ಕ ತುಂಡು
ಅರಿಶಿನ ಪೌಡರ್ - 1/4 ಚಮಚ
ಉಪ್ಪು
 
ಮಸಾಲೆಗಾಗಿ-
 
ಧನಿಯಾ 2-3 ಚಮಚ
ಕರಿ ಮೆಣಸು 1 ಚಮಚ
ಜೀರಿಗೆ ½ ಚಮಚ
ದಾಲ್ಚಿನಿ ½ ತುಂಡು
ಲವಂಗ 2
ಬೆಳ್ಳುಳ್ಳಿ 3-4 ಎಸಳು
ಕೆಂಪು ಮೆಣಸಿನಕಾಯಿ - 2 ರಿಂದ 3 (ಖಾರ ಬೇಕಿದ್ದಲ್ಲಿ ಜಾಸ್ತಿ ಸಹ ಹಾಕಬಹುದು)
ಕರಿಬೇವು
 
ಮಾಡುವ ವಿಧಾನ -
 
ಒಂದು ಬಾಣಲೆಯಲ್ಲಿ ಧನಿಯಾ, ಕರಿಮೆಣಸು, ಜೀರಿಗೆ, ದಾಲ್ಚಿನಿ ಮತ್ತು ಲವಂಗ ಮಸಾಲೆಗೆ ಬೇಕಾದ ಎಲ್ಲವನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಅದಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಈರುಳ್ಳಿ ಮತ್ತು ಶುಂಠಿಯನ್ನು ಉಪ್ಪು ಮತ್ತು ಅರಿಶಿನ ಪುಡಿ ಸೇರಿಸಿ ಒಂದೆರಡು ನಿಮಿಷಗಳ ಕಾಲ ಹುರಿಯಿರಿ. ನಂತರ ಟೊಮ್ಯಾಟೊ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಟೊಮ್ಯಾಟೊ ಮೃದುವಾಗುವ ತನಕ ಫ್ರೈ ಮಾಡಿ. ನಂತರ ಅದಕ್ಕೆ ಮೊದಲೇ ಶುಚಿಗೊಳಿಸಿರುವ ಏಡಿ ತುಂಡುಗಳನ್ನು ಹಾಕಿ ಅರ್ಧ ಕಪ್ ನೀರನ್ನು ಸೇರಿಸಿ. 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ ಅದಕ್ಕೆ ರುಬ್ಬಿದ ಮಸಾಲ ಸೇರಿಸಿ. ಅರ್ಧ ಕಪ್ ನೀರನ್ನು ಸೇರಿಸಿ ಬಾಣಲೆಗೆ ಮುಚ್ಚಳವನ್ನು ಮುಚ್ಚಿ. ಕಡಿಮೆ ಉರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿದರೆ ಸ್ವಾಧೀಷ್ಟವಾದ 
ಮಲಬಾರ್ ಏಡಿ ಕರಿ ಸವಿಯಲು ಸಿದ್ದ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಭಾರತದ ಆಲೂ ಪರೋಟಾ