Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂಬುದು ಯುವಕರ ಒತ್ತಾಸೆ- ಮೊಯ್ಲಿ

ರಾಹುಲ್ ಗಾಂಧಿ  ಪ್ರಧಾನಿಯಾಗಬೇಕು ಎಂಬುದು ಯುವಕರ ಒತ್ತಾಸೆ- ಮೊಯ್ಲಿ
ಹೈದರಾಬಾದ್ , ಮಂಗಳವಾರ, 6 ಫೆಬ್ರವರಿ 2018 (20:40 IST)

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಅವರು ದೇಶದ ಪ್ರಧಾನಮಂತ್ರಿ ಆಗಬೇಕು ಎಂಬುದು ಪಕ್ಷ ಹಾಗೂ ಯುವಕರ ಒತ್ತಾಸೆಯಾಗಿದೆ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ  ನರೇಂದ್ರಮೋದಿ  ಅವರಿಗಿಂತಲೂ ರಾಹುಲ್ ಗಾಂಧಿ  ಅವರು ಮಿಗಿಲಾಗಿದ್ದಾರೆ ಎಂದು ತಿಳಿಸಿದ್ದಾರೆ.

ಶರದ್ ಪವಾರ್ ಹಾಗೂ ಮಮತಾ ಬ್ಯಾನರ್ಜಿ ಅವರು ಯುಪಿಎ ಮುನ್ನೆಡೆಸುವ ಮಹತ್ವಕಾಂಕ್ಷೆ ಹೊಂದಿದ್ದರೆ, ವಾಸ್ತವಿಕತೆ ಬೇರೆಯೇ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.

ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಜನಪ್ರಿಯತೆ ಕಡಿಮೆಯಾಗುತ್ತಿದೆ. ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಂಡಿದೆ. ಸಾಮರ್ಥ್ಯವನ್ನೂ ಹೊಂದಿದೆ  ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 


Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟಾಚಾರ ದಾಖಲೆಯಿದ್ದರೆ ಸರ್ಕಾರ ವಜಾಗೊಳಿಸಲು ಉಗ್ರಪ್ಪ ಮೋದಿಗೆ ಸವಾಲು