Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರ ನೋಟು ನಿಷೇಧವನ್ನು ಸೀಕ್ರೆಟ್ ಆಗಿಟ್ಟಿದ್ದೇಕೆ ಗೊತ್ತಾ?

ಕೇಂದ್ರ ಸರ್ಕಾರ ನೋಟು ನಿಷೇಧವನ್ನು ಸೀಕ್ರೆಟ್ ಆಗಿಟ್ಟಿದ್ದೇಕೆ ಗೊತ್ತಾ?
ನವದೆಹಲಿ , ಗುರುವಾರ, 12 ಅಕ್ಟೋಬರ್ 2017 (08:42 IST)
ನವದೆಹಲಿ: 2016 ರ ನವಂಬರ್ 8 ರಂದು ಯಾರೂ ಕೂಡಾ ಮರೆಯಲು ಸಾಧ್ಯವಿಲ್ಲ. ದಿಡೀರ್ ಎಂದು ಟಿವಿ ಪರದೆ ಮೇಲೆ ಕಾಣಿಸಿಕೊಂಡ ಪ್ರಧಾನಿ ಮೋದಿ ನಾಳೆಯಿಂದ 500 ಮತ್ತು 1000 ನೋಟು ಚಲಾವಣೆ ಇರಲ್ಲ ಎಂದ ದಿನವದು.

 
ಹೀಗೆ ನೋಟು ನಿಷೇಧ ವಿಚಾರವನ್ನು ಕೇಂದ್ರ ಸರ್ಕಾರ ಅಷ್ಟೊಂದು ಗೌಪ್ಯವಾಗಿರಿಸಿದ್ದೇ ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದನ್ನು ಅಷ್ಟೊಂದು ಗೌಪ್ಯ ಮಾಡಿದ್ದರ ಹಿಂದಿನ ಕಾರಣವೇನೆಂಬುದನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಬಿಚ್ಚಿಟ್ಟಿದ್ದಾರೆ.

ಒಂದು ವೇಳೆ ನೋಟು ನಿಷೇಧವನ್ನು ಮೊದಲೇ ತಿಳಿಸಿದ್ದರೆ, ಕಪ್ಪು ಹಣ ಹೊಂದಿದ್ದವರು ತಮ್ಮ ಬಳಿಯಿರುವ ಹಣದಿಂದ ಚಿನ್ನಾಭರಣ, ಭೂಮಿ, ವಾಹನ ಹೀಗೇ ಏನಾದರೂ ಖರೀದಿ ಮಾಡಿ ಕಪ್ಪು ಹಣ ಚಲಾವಣೆ ಮಾಡುವ ಸಂಭವವಿತ್ತು. ಅದಕ್ಕಾಗಿಯೇ ಈ ರೀತಿ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದೆವು ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಸಕ್ಕೆಂದು ಬಂದು ಭಾರತದಲ್ಲಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರಜೆಗೆ ಸಚಿವೆ ಸುಷ್ಮಾ ನೆರವು