Select Your Language

Notifications

webdunia
webdunia
webdunia
webdunia

ವಾಜಪೇಯಿಯವರ ಸಂತಾಪ ಸೂಚನಾ ಸಭೆಯಲ್ಲಿ ಗಹಗಹಿಸಿ ನಕ್ಕಿರುವ ಸಚಿವ ಮಹಾಶಯರು ಯಾರು ಗೊತ್ತಾ?

ವಾಜಪೇಯಿಯವರ ಸಂತಾಪ ಸೂಚನಾ ಸಭೆಯಲ್ಲಿ ಗಹಗಹಿಸಿ ನಕ್ಕಿರುವ ಸಚಿವ ಮಹಾಶಯರು ಯಾರು ಗೊತ್ತಾ?
ರಾಯಪುರ , ಶುಕ್ರವಾರ, 24 ಆಗಸ್ಟ್ 2018 (15:24 IST)
ರಾಯಪುರ : ಚತ್ತೀಸ್ ಘಡ್ ದಲ್ಲಿ ಸಚಿವರಿಬ್ಬರು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಂತಾಪ ಸೂಚನಾ ಸಭೆಯಲ್ಲಿ  ಗಹಗಹಿಸಿ ನಕ್ಕಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಹೌದು. ಗುರುವಾರ ಚತ್ತೀಸ್​ಘಡಲ್ಲಿ ನಡೆದ ಅಟಲ್​ ಜಿ ಅಸ್ಥಿ ವಿಸರ್ಜನೆ ಹಾಗೂ ಸಂತಾಪ ಸೂಚನಾ ಸಭೆಯಲ್ಲಿ ಕೃಷಿ ಸಚಿವ ಬ್ರಿಜ್​ಮೋಹನ್​ ಅಗರ್ವಾಲ್​ ಹಾಗೂ ಆರೋಗ್ಯ ಸಚಿವ ಅಜಯ್​ ಚಂದ್ರಶೇಖರ್​ ಅವರು ವೇದಿಕೆಯಲ್ಲಿ ಟೇಬಲ್​ ತಟ್ಟಿ  ಗಹಗಹಿಸಿ ನಕ್ಕಿದ್ದಾರೆ. ಇದನ್ನು ಕಂಡ ಬಿಜೆಪಿ ವರಿಷ್ಠ ಧರ್ಮಲಾಲ್​ ಕೌಶಿಕ್​ ವೇದಿಕೆಯಲ್ಲಿ ನಗದಂತೆ ಸೂಚನೆ ನೀಡಿದ್ದಾರೆ. ಈ ವಿಡಿಯೋ ಇದೀಗ ಬಾರೀ ಚರ್ಚೆಗೆ ಕಾರಣವಾಗಿದೆ.


ಸಚಿವರ ಈ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್​, ವಾಜಪೇಯಿ ಅವರು ಬದುಕಿದ್ದಾಗ ಬಿಜೆಪಿ ಅವರನ್ನು ಕಡೆಗಣಿಸಿತ್ತು. ಈಗ ಬಿಜೆಪಿ ಸಚಿವರ ಈ ವರ್ತನೆ ವಾಜಪೇಯಿ ಅವರ ಬಗ್ಗೆ ಎಷ್ಟು ಗೌರವ ಹೊಂದಿದ್ದಾರೆ ಎಂಬುದನ್ನು ತೋರಿಸುತ್ತದೆ. ಅಟಲ್​ ಜೀ ಅವರ ಮೇಲೆ ಬಿಜೆಪಿ ಹಾಗೂ ಸಿಎಂ ರಮಣಸಿಂಗ್​ ತೋರುತ್ತಿರುವ ಗೌರವ, ಪ್ರೀತಿ ಎಲ್ಲವೂ ನಾಟಕ ಎಂದು ಟೀಕಿಸಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಾಲೂ ಪ್ರಸಾದ್ ಯಾದವ್ ಗೆ ಮರಳಿ ಜೈಲಿಗೆ ಹೋಗುವಂತೆ ಆದೇಶಿಸಿದ ಜಾರ್ಖಂಡ್ ಹೈಕೋರ್ಟ್