Select Your Language

Notifications

webdunia
webdunia
webdunia
webdunia

ಉತ್ತರಪ್ರದೇಶ ಯಾದವ್, ಮುಸ್ಲಿಮರದ್ದು, ಬ್ರಾಹ್ಮಣರು ರಾಜ್ಯದಿಂದ ತೊಲಗಲಿ: ಸಮಾಜವಾದಿ ಪಕ್ಷ

ಉತ್ತರಪ್ರದೇಶ ಯಾದವ್, ಮುಸ್ಲಿಮರದ್ದು, ಬ್ರಾಹ್ಮಣರು ರಾಜ್ಯದಿಂದ ತೊಲಗಲಿ: ಸಮಾಜವಾದಿ ಪಕ್ಷ
ಲಕ್ನೋ , ಮಂಗಳವಾರ, 9 ಆಗಸ್ಟ್ 2016 (12:27 IST)
ಉತ್ತರಪ್ರದೇಶ ರಾಜ್ಯ ಯಾದವರು ಮತ್ತು ಮುಸ್ಲಿಮರಿಗೆ ಸೇರಿದ್ದಾಗಿದೆ. ಬ್ರಾಹ್ಮಣರು ಮೋದಿಯವರ ಅಹ್ಮದಾಬಾದ್‌ಗೆ ತೆರಳಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ರಾಜೀವ್ ಕುಮಾರ್ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. 
 
ಜಮ್ಮು ಕಾಶ್ಮಿರದಲ್ಲಿ ಕಾಶ್ಮಿರಿ ಪಂಡಿತರನ್ನು ಹೊರಗಿಟ್ಟಂತೆ ಬ್ರಾಹ್ಮಣರು ಉತ್ತರಪ್ರದೇಶವನ್ನು ತೊರೆದು ಗುಜರಾತ್‌ಗೆ ತೆರಳಬೇಕು. ಬ್ರಾಹ್ಮಣರು ಲಂಚಬಾಕರು ಎಂದು ಹೇಳಿಕೆ ನೀಡಿ ಆಘಾತ ಮೂಡಿಸಿದ್ದಾನೆ.
 
ಮುಂದಿನ ವರ್ಷದ ಆರಂಭದಲ್ಲಿ ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ, ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಸಮಾಜವಾದಿ ಪಕ್ಷದ ಮುಖಂಡರ ವರ್ತನೆಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಉತ್ತರಪ್ರದೇಶಧ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ, ಸಮಾಜವಾದಿ ಪಕ್ಷ, ಬಿಎಸ್‌ಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಅಗ್ನಿಪರೀಕ್ಷೆಯಾಗಿದೆ.
 
ಗಮನಾರ್ಹ ವಿಷಯವೆಂದರೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 80 ಕ್ಷೇತ್ರಗಳಲ್ಲಿ 71 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಎರಡು ಕ್ಷೇತ್ರ, ಸಮಾಜವಾದಿ ಪಕ್ಷ ಐದು ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಬಿಎಸ್‌ಪಿ ಖಾತೆ ತೆರೆಯಲು ಕೂಡಾ ವಿಫಲವಾಗಿತ್ತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

2 ಗಂಟೆಯಲ್ಲೇ ಜನರ ಮೇಲೆ ಹೇಗೆಲ್ಲಾ ದಾಳಿ ಮಾಡ್ತಾ ಗೊತ್ತಾ ಈ ನಾಯಿ.! ವಿಡಿಯೋ