Select Your Language

Notifications

webdunia
webdunia
webdunia
webdunia

ಚಾಕ್ಲೇಟ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ 8ವರ್ಷ ಬಾಲಕಿಯ ಮೇಲೆ ಆರು ಮಂದಿಯಿಂದ ಅತ್ಯಾಚಾರ

ಚಾಕ್ಲೇಟ್ ಕೊಡಿಸುವುದಾಗಿ ಕರೆದುಕೊಂಡು ಹೋಗಿ 8ವರ್ಷ ಬಾಲಕಿಯ ಮೇಲೆ ಆರು ಮಂದಿಯಿಂದ ಅತ್ಯಾಚಾರ
ಪುಣೆ , ಶುಕ್ರವಾರ, 22 ಡಿಸೆಂಬರ್ 2017 (13:26 IST)
ಐದು ಅಪ್ರಾಪ್ತ ಬಾಲಕರು ಸೇರಿದಂತೆ ಆರು ಮಂದಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ವರದಿಯಾಗಿದೆ.
 
ಸಂತ್ರಸ್ತ ಬಾಲಕಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಆಕೆಯನ್ನು ತಂದೆ ಆಸ್ಪತ್ರೆಗೆ ದಾಖಲಿಸಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಚಾಕ್ಲೇಟ್ ಕೊಡಿಸುವುದಾಗಿ ಹೇಳಿ ಆರೋಪಿಗಳು ಬಾಲಕಿಯನ್ನ ಕರೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.
 
ಆರೋಪಿಗಳು ಬಾಲಕಿಯ ಮೇಲೆ ಈ ಹಿಂದೆಯೂ ಹಲವಾರು ಬಾರಿ ಲೈಂಗಿಕ ದೌರ್ಜನ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸುತ್ತಿದ್ದಾರೆ. ಈಗಾಗಲೇ 19 ವರ್ಷದ ಆರೋಪಿಯನ್ನು ಬಂಧಿಸಿಲಾಗಿದ್ದು, ಉಳಿದ 5 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ ಆರೋಪಿಗಳು 12 ರಿಂದ 19 ವರ್ಷದ ವಯೋಮಿತಿಯವರು ಎಂದು ತಿಳಿದುಬಂದಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಈ ಪಿನ್ ನಂಬರ್ ಬಳಕೆದಾರರು ಎಚ್ಚರದಿಂದಿರಿ