Select Your Language

Notifications

webdunia
webdunia
webdunia
webdunia

ಕುಡಿದ ಮತ್ತಿನಲ್ಲಿ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ನೀಚ ತಂದೆ

ಕುಡಿದ ಮತ್ತಿನಲ್ಲಿ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ನೀಚ ತಂದೆ
ನೋಯ್ಡಾ , ಸೋಮವಾರ, 17 ಸೆಪ್ಟಂಬರ್ 2018 (06:39 IST)
ನೋಯ್ಡಾ : ಕುಡಿದ ಮತ್ತಿನಲ್ಲಿ ತಂದೆ ಹೆತ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ನೀಚ ಕೃತ್ಯ ನೋಯ್ಡಾ ಪ್ರದೇಶದಲ್ಲಿ ನಡೆದಿದೆ.


ರಾತ್ರಿ ಕಂಠ ಪೂರ್ತಿ ಕುಡಿದ ಬಂದ ತಂದೆ ರೂಮಿನಲ್ಲಿ ಒಬ್ಬಳೆ ಮಲಗಿದ್ದ ಮಗಳನ್ನು ಕಂಡು ಆಕೆಯ ಮೇಲೆ ಎರಗಿದ್ದಾನೆ. ಮರುದಿನ ಬೆಳಿಗ್ಗೆ ತಾಯಿಗೆ ಈ ವಿಚಾರ ತಿಳಿದಾಗ ಕಾಮುಕ ತಂದೆ ಈ ವಿಷಯ ಬಹಿರಂಗ ಪಡಿಸಿದರೆ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೂ ಸುಮ್ಮನಿರದ ತಾಯಿ ಈ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.


ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು,  ಅತ್ಯಾಚಾರ  ನಡೆದಿರುವುದು ದೃಢಪಟ್ಟಿದೆ. ಸದ್ಯ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ತಂದೆಯನ್ನು ಬಂಧಿಸಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಲ್ಲಾಳಿ ಅರೆಸ್ಟ್