Select Your Language

Notifications

webdunia
webdunia
webdunia
webdunia

ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತುಹಾಕಬೇಕು: ಪ್ರಧಾನಿ ಮೋದಿ

ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತುಹಾಕಬೇಕು: ಪ್ರಧಾನಿ ಮೋದಿ
delhi , ಬುಧವಾರ, 13 ಡಿಸೆಂಬರ್ 2023 (11:26 IST)
ಭಯೋತ್ಪಾದನೆ ಎಲ್ಲದಕ್ಕಿಂತ ಮುಖ್ಯ ಜಾಗತಿಕ ಸಮಸ್ಯೆಯಾಗಿದ್ದು, ಸಂಘಟಿತ ಹೋರಾಟದಿಂದ ಭಯೋತ್ಪಾದನೆಯನ್ನು ಬುಡಸಮೇತ ತೊಡೆದು ಹಾಕಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಗುಡುಗಿದ್ದಾರೆ.
 
ಜಗತ್ತಿನ ಕೆಲ ರಾಷ್ಟ್ರಗಳು ಈಗಲೂ ಭಯೋತ್ಪಾದನೆಯನ್ನೇ ತಮ್ಮ ರಾಜನೀತಿಯ ಅಸ್ತ್ರವನ್ನಾಗಿಸಿಕೊಂಡಿವೆ ಎಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
 
ಭಯೋತ್ಪಾದಕತೆಯನ್ನು ಧರ್ಮದಿಂದ ಬೇರ್ಪಡಿಸಿ ನೋಡಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತ, ಉಗ್ರವಾದವನ್ನು ರಾಜನೀತಿಯ ಅಸ್ತ್ರವಾಗಿಸಿಕೊಂಡಿರುವ ರಾಷ್ಟ್ರಗಳ ವಿರುದ್ಧ ಯಾವುದೇ ರಾಜಕೀಯ ರಾಜಕೀಯ ವಿಚಾರಗಳನ್ನು ಪರಿಗಣಿಸದೆ ಕ್ರಮ ಕೈಗೊಳ್ಳಬೇಕಿದೆ,' ಎಂದು ಮನವಿ ಮಾಡಿಕೊಂಡಿದ್ದಾರೆ.
 
ಉಗ್ರರಿಗೆ ನೆರವು ನೀಡುತ್ತಿರುವವರಿಂದ ದೂರಾಗಿ ಮಾನವೀಯತೆಗೆ ಬೆಲೆ ಕೊಡುವವರೊಂದಿಗೆ ನಾವು ಒಗ್ಗೂಡಬೇಕಿದೆ. ಭಯೋತ್ಪಾದನೆಯಂಥ ಸವಾಲನ್ನು ಎದುರಿಸಲು ಅಂತರರಾಷ್ಟ್ರೀಯ ಕಾನೂನುಗಳಲ್ಲಿ ಸುಧಾರಣೆ ತರಬೇಕಿದೆ, ಎಲ್ಲರೂ ಒಕ್ಕೊರಲಿನಿಂದ ಉಗ್ರವಾದದ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಅವರು ಹೇಳಿದ್ದಾರೆ.
 
'ಭಯೋತ್ಪಾದನೆಗೆ ಪ್ರಾಯೋಜಕತ್ವ ಮತ್ತು ಬೆಂಬಲ ನೀಡುವವರನ್ನು ನಾವು ದೂರವಿಡಬೇಕು. ಮಾನವೀಯ ಮೌಲ್ಯಗಳಿಗೆ  ಬೆಲೆ ಕೊಡುವವರ ಬೆಂಬಲವಾಗಿ ನಿಲ್ಲಬೇಕಿದೆ. ಭಯೋತ್ಪಾದನೆಯ ಅನನ್ಯ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಕಾನೂನು ಚೌಕಟ್ಟನ್ನು ಪುನರ್ ರಚಿಸುವ ಅಗತ್ಯವಿದೆ', ಎಂದು ಪ್ರಧಾನಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಪತಿಗಳು ಬಳಸುತ್ತಿದ್ದ ಕೋಡ್ ಗೊತ್ತೆ?