Select Your Language

Notifications

webdunia
webdunia
webdunia
webdunia

ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು

ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು
ನವದೆಹಲಿ , ಶುಕ್ರವಾರ, 9 ಮಾರ್ಚ್ 2018 (11:31 IST)
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ  ಕೋರ್ಟ್ ದಯಾಮರಣಕ್ಕೆ ಸಮ್ಮತಿ ನೀಡಿದೆ.  ಆದರೆ ದಯಾಮರಣಕ್ಕೆ ಕೆಲವು ಷರತ್ತು ವಿಧಿಸಿದೆ.

ದಯಾಮರಣಕ್ಕೆ ಲಿಖಿತ ರೂಪದಲ್ಲಿಮನವಿ ಸಲ್ಲಿಸಬೇಕು. ಗೌರವಪೂರ್ವಕವಾಗಿ ಸಾಯುವುದೂ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

ಇದಕ್ಕೆ ಮಾರ್ಗಸೂಚಿಗಳನ್ನು ಸೂಚಿಸಲಾಗಿದ್ದು ತಕ್ಕ ಕಾನೂನು ರೂಪಿಸಲು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಒಬ್ಬ ವ್ಯಕ್ತಿಗೆ ತನಗೆ ಅಳವಡಿಸಿರುವ ಜೀವ ರಕ್ಷಕ ಸಾಧನವನ್ನು ಯಾವಾಗ ತೆಗೆಯಬೇಕೆಂದು ನಿರ್ಧರಿಸುವ ಹಕ್ಕನ್ನು ನೀಡಬೇಕು ಎಂದು ಇದೀಗ ಸುಪ್ರೀಂ ಕೋರ್ಟ್ ತೀರ್ಪು ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಿದ ಸಚಿವ ಜನಾರ್ದನರೆಡ್ಡಿ