Select Your Language

Notifications

webdunia
webdunia
webdunia
webdunia

ಹೆತ್ತ ತಂದೆತಾಯಿಯೇ ಮಗಳಿಗೆ ನೀಡಿದ್ದಾರೆ ಇಂತಹ ಘೋರ ಶಿಕ್ಷೆ

ಹೆತ್ತ ತಂದೆತಾಯಿಯೇ ಮಗಳಿಗೆ ನೀಡಿದ್ದಾರೆ ಇಂತಹ ಘೋರ ಶಿಕ್ಷೆ
ಚಂಡೀಗಢ , ಸೋಮವಾರ, 4 ಫೆಬ್ರವರಿ 2019 (06:27 IST)
ಚಂಡೀಗಢ : ಹೆತ್ತ ತಂದೆತಾಯಿಯೇ ತಮ್ಮ 18 ವರ್ಷದ ಮಗಳ  ಮುಖ, ಕೈಗಳ ಮೇಲೆ ಇಕ್ಕಳದಿಂದ ಬರೆ ಹಾಕಿ ಕೋಣೆಯಲ್ಲಿ ಕೂಡಿ ಹಾಕಿದ ಘಟನೆ ಪಂಜಾಬ್ ರಾಜ್ಯದ ರಾಮದರ್ಬಾರ್ ನಲ್ಲಿ ನಡೆದಿದೆ.


ಯುವತಿಗೆ ತಂದೆತಾಯಿ ಆಕೆಯ ಚಿಕ್ಕಮ್ಮನ ಮನೆಗೆ ಹೋಗಬಾರದು ಎಂದು ಹೇಳಿದ್ದರೂ ಕೂಡ ಅವರ ಮಾತನ್ನು ಕೇಳದೆ ಆಕೆ ಚಿಕ್ಕಮ್ಮನ ಮನೆಗೆ ಹೋಗಿದ್ದಾಳೆ. ಇದರಿಂದ ಕೋಪಗೊಂಡ ತಂದೆ, ಮಗಳು ಮನೆಗೆ ಬಂದ ತಕ್ಷಣ ಇಕ್ಕಳದಿಂದ ಮಗಳ ಮುಖ, ಕೈಗಳ ಮೇಲೆ ಬರೆ ಹಾಕಿದ್ದಾನೆ. ಇದಕ್ಕೆ ಬೆಂಬಲ ನೀಡಿದ ತಾಯಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸದೇ ಕೋಣೆಯಲ್ಲಿ ಕೂಡಿ ಹಾಕಿದ್ದಾಳೆ.


ಬರೆ ಹಾಕಿದ್ದರಿಂದ ಯುವತಿಯ ಕೆನ್ನೆ ಭಾಗದ ಚರ್ಮ ಸಂಪೂರ್ಣ ಸುಟ್ಟುಹೋಗಿದ್ದ ಪರಿಣಾಮ ಯುವತಿ ನೋವಿನಿಂದ ಕಿರುಚಾಡಿದ್ದಾಳೆ. ಆಕೆಯ ಕಿರುಚಾಟ ಕೇಳಿ ನೆರೆಹೊರೆಯವರು ಮನೆಗೆ ಬಂದು ಆಕೆಯ ಸ್ಥಿತಿಯನ್ನು ಕಂಡು ಕೂಡಲೇ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಠಾಣೆಯಲ್ಲಿ ತಂದೆ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಯುವತಿಯ ತಂದೆ ಪರಾರಿಯಾಗಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ಶುರುಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೋಳಿಯ ಮೇಲೆ ಕೇಸ್ ದಾಖಲು. ಕಾರಣವೇನು ಗೊತ್ತಾ?