Select Your Language

Notifications

webdunia
webdunia
webdunia
webdunia

ನರೇಂದ್ರ ಮೋದಿ ಕುರಿತ 50 ರೋಚಕ ಸತ್ಯಗಳು.

ನರೇಂದ್ರ ಮೋದಿ ಕುರಿತ 50 ರೋಚಕ ಸತ್ಯಗಳು.
ನವದೆಹಲಿ , ಸೋಮವಾರ, 26 ಮೇ 2014 (16:03 IST)
ಮೋದಿ, ಮೋದಿ, ಮೋದಿ... ಪ್ರತಿಯೊಬ್ಬ ಭಾರತೀಯರ ನಾಲಗೆಯಲ್ಲೂ ಕಳೆದೆರಡು ತಿಂಗಳಿಂದ ಹರಿದಾಡುತ್ತಿಡುವ ಪದವಿದು. ದೇಶದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಮೋದಿ ಕುರಿತು ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಪ್ರತಿಯೊಬ್ಬರು ಕೂಡ, ಸಾಮಾನ್ಯ ವ್ಯಕ್ತಿಯಾಗಿ ಹುಟ್ಟು ಅಸಾಮಾನ್ಯನಾಗಿ ಬೆಳೆದು ನಿಂತ ನರೇಂದ್ರ ದಾಮೋದರದಾಸ ಮೋದಿ ಕುರಿತ ಚಿಕ್ಕ ಪುಟ್ಟ ವಿಷಯಗಳನ್ನು ತಿಳಿದುಕೊಳ್ಳ ಬಯಸುತ್ತಿದ್ದಾರೆ. ಬನ್ನಿ ನೀವು ಕೂಡ ನಮೋ ಕುರಿತ ಕೆಲವು ರೋಚಕ ಸತ್ಯಗಳನ್ನು ಆಸ್ವಾದಿಸಿ.... 
 
 
ನರಿಯಾನ ಬಾಲ್ಯ
 
1. 17 ಡಿಸೆಂಬರ್ 1950ರಲ್ಲಿ ವಡನಗರ ಎಂಬ ಹಳ್ಳಿಯಲ್ಲಿ ದಾಮೋದರ್ ಮೂಲಚಂದ್ ಮೋದಿ ಮತ್ತು ಹೀರಾಬೆನ್ ದಂಪತಿಗಳ ಸುಪುತ್ರನಾಗಿ ಜನನ. 
 
2. ಬೆನ್ 5 ಜನ ಮಕ್ಕಳಲ್ಲಿ ಮೋದಿ ಎರಡನೇಯವರು
 
3. ಬಾಲ್ಯದಲ್ಲಿ ಅವರನ್ನು ನರಿಯಾ ಎಂದು ಕರೆಯಲಾಗುತ್ತಿತ್ತು. 
 
4. ಮೋದಿ ತಂದೆ ರೇಲ್ವೇ ನಿಲ್ದಾಣದಲ್ಲಿ ಚಹಾ ಅಂಗಡಿಯನ್ನು ನಡೆಸುತ್ತಿದ್ದರು. 
 
5. 1965ರಲ್ಲಿ ಭಾರತ-ಪಾಕ್ ಯುದ್ಧದ ಸಮಯದಲ್ಲಿ ಸ್ಟೇಶನ್‌ನಿಂದ ಪಯಣ ಬೆಳಸಿದ ಸೈನಿಕರಿಗೆ ಅವರು ಚಹಾ ನೀಡಿದ್ದರು. 
 
6. ಬಾಲ್ಯದಲ್ಲಿ ನರಿಯಾ ತಮ್ಮ ವಯಸ್ಸಿನ ಮಕ್ಕಳಿಗಿಂತ ವಿಭಿನ್ನರಾಗಿದ್ದರು. 
 
7. ಅವರು ವಡನಗರದ ಭಗವತಾಚಾರ್ಯ ನಾರಾಯಣಾಚಾರ್ಯ ಶಾಲೆಯಲ್ಲಿ ಓದುತ್ತಿದ್ದರು. 
 
8 ಬಾಲ್ಯದಲ್ಲಿ ಅವರಿಗೆ ನಟನೆಯ ಹುಚ್ಚಿತ್ತು. 
 
9. ಶಾಲೆಯಲ್ಲಿ ನಡೆಯುವ ನಟನೆ, ಚರ್ಚೆ, ನಾಟಕಗಳಲ್ಲಿ ಭಾಗವಹಿಸಿ ಪುರಸ್ಕಾರಗಳನ್ನು ಪಡೆಯುತ್ತಿದ್ದರು. ಎನ್‌ಸಿಸಿಯಲ್ಲೂ ಸೇರಿಕೊಂಡಿದ್ದರು. 
 
10. ಒಮ್ಮೆ ಅವರು ಶರ್ಮಿಷ್ಠಾ ಕೆರೆಯಿಂದ ಮೊಸಳೆಯ ಮರಿಯನ್ನು ಹಿಡಿದು ತಂದಿದ್ದರು. ತಾಯಿ ಅವರಿಗೆ ತಿಳಿ ಹೇಳಿದ ನಂತರ ಅದನ್ನು ಮರಳಿ ಕೆರೆಗೆ ಬಿಟ್ಟಿದ್ದರು. 


ಸನ್ಯಾಸಿಯಾಗ ಬಯಸಿ ಹಿಮಾಲಯಕ್ಕೆ ತೆರಳಿದ ನರೇಂದ್ರ

11. ಬಾಲ್ಯದಲ್ಲಿ ಸಾಧು-ಸಂತರಿಂದ ಪ್ರಭಾವಿತರಾಗಿದ್ದ ಅವರು  ಸನ್ಯಾಸಿಯಾಗ ಬಯಸಿದ್ದರು. 
 
12. ಶಾಲಾ ಶಿಕ್ಷಣ ಮುಗಿಸಿದ ತರುವಾಯ ಸನ್ಯಾಸಿಯಾಗುವುದಕ್ಕಾಗಿ ಅವರು ಮನೆ ಬಿಟ್ಟು ಓಡಿ ಹೋಗಿದ್ದರು. ತಮ್ಮ ಉದ್ದೇಶ ಸಾಧನೆಗಾಗಿ ಅವರು ಪಶ್ಚಿಮ ಬಂಗಾಳದ ರಾಮಕೃಷ್ಣ ಆಶ್ರಮ  ಸೇರಿದಂತೆ ಅನೇಕ ಸ್ಥಳಗಳಲ್ಲಿ ಅಲೆಯುತ್ತಿದ್ದರು. 
 
13. ತಮ್ಮ  ಬಾಲ್ಯದಲ್ಲೇ ಮೋದಿ ಆರ್‌ಎಸ್ಎಸ್ ಸೇರಿದ್ದರು. 1958ರ ದೀಪಾವಳಿ ದಿನ ಆರ್‌ಎಸ್ಎಸ್‌ನ ಪ್ರಥಮ ಪ್ರಾಂತ್ಯ ಪ್ರಚಾರಕ ಲಕ್ಷ್ಮಣ ರಾವ್ ಇನಾಮದಾರ್ ಅಲಿಯಾಸ್ ವಕೀಲ್ ಸಾಹಬ್ ಮೋದಿಯವರಿಗೆ ಬಾಲ ಸ್ವಯಂಸೇವಕ ಪ್ರಮಾಣ ವಚನ ನೀಡಿದ್ದರು. 
 
14. ಅವರು ತುಂಬ ನಿಷ್ಠವಂತ ಮತ್ತು ಪರಿಶ್ರಮಿ ಕಾರ್ಯಕರ್ತರಾಗಿದ್ದರು. ದೊಡ್ಡ ದೊಡ್ಡ ಶಿಬಿರಗಳಲ್ಲಿ ನಿರ್ವಹಣಾ ಕೌಶಲ್ಯವನ್ನು ತೋರುತ್ತಿದ್ದರು. ಸಮ್ಮೇಳನಕ್ಕೆ ಆಗಮಿಸುವ ಆರ್‌ಎಸ್ಎಸ್  ನಾಯಕರ ಬಸ್ ಮತ್ತು ರೈಲು ರಿಸರ್ವೇಸನ್ ಜವಾಬ್ದಾರಿ ಮೋದಿಯದಾಗಿತ್ತು. 
 
15.ಹಿಮಾಲಯದಲ್ಲಿ ಅನೇಕ ತಿಂಗಳುಗಳವರೆಗೆ ಅವರು ಸಾಧು-ಸಂತರ ಜತೆ ಇದ್ದರು. ಎರಡು ವರ್ಷಗಳ ನಂತರ ಹಿಮಾಲಯದಿಂದ ಮರಳಿದ ಅವರು ಸನ್ಯಾಸಿ ಜೀವನ ತ್ಯಾಗ ಮಾಡುವ ನಿರ್ಧಾರ ಮಾಡಿದರು. 
 
ಕಸಬರಕೆ ಹಿಡಿಯುತ್ತಿದ್ದ ಮೋದಿ
 
16. ಹಿಮಾಲಯದಿಂದ ಹಿಂತಿರುಗಿದ ನಂತರ ತನ್ನ ಸಹೋದರನ ಜತೆ ಅಹಮದಾಬಾದಿನ ಅನೇಕ ಸ್ಥಳಗಳಲ್ಲಿ ಚಹಾ ಅಂಗಡಿಯನ್ನು ನಡೆಸಿದರು. ಎಲ್ಲ ಕಷ್ಟಗಳನ್ನು ಸಹಿಸುತ್ತ ಅವರು ಚಹಾ ಮಾರುವ ಕೆಲಸವನ್ನು ಮಾಡಿದರು. 
 
17. ಮೋದಿಯವರಿಗೆ 17 ವಯಸ್ಸಾದಾಗ ಅವರ ಮದುವೆಯನ್ನು ಬಾನ್ಸಕತಾ ಜಿಲ್ಲೆಯ ರಾಜೋಸಾನಾ ಎಂಬ ಗ್ರಾಮದ ಜಶೋಧಾ ಬೆನ್ ಅವರೊಡನೆ ಮಾಡಲಾಯಿತು.
 
18. ಆದರೆ ಮೂರು ತಿಂಗಳಲ್ಲಿಯೇ  ಮನೆಯನ್ನು ತ್ಯಜಿಸಿದ ಅವರು ಸಂಘದ ಪ್ರಚಾರಕರಾದರು. 
 
 19. ಅಹಮದಾಬಾದಿನ ಸಂಘದ ಮುಖ್ಯಾಲಯದಲ್ಲಿ ವಾಸಿಸುತ್ತಿದ್ದ ಮೋದಿ ಎಲ್ಲ ರೀತಿಯ ಕೆಲಸಗಳನ್ನು ಮಾಡುತ್ತಿದ್ದರು. ಕ್ಲೀನಿಂಗ್, ಚಹಾ ಮಾಡುವುದು ಮತ್ತು ಹಿರಿಯ ನಾಯಕರ ಬಟ್ಟೆಗಳನ್ನು ಒಗೆಯುವ ಕೆಲಸವನ್ನು ಮಾಡುತ್ತಿದ್ದರು. 
 
20. ಪ್ರತಿ ಹೊಸ ಕೆಲಸವನ್ನು ಮಾಡುವ ಮೊದಲು ಮೋದಿ ತಮ್ಮ ತಾಯಿಯವರ ಆಶೀರ್ವಾದ ಪಡೆಯುತ್ತಾರೆ. ಪ್ರತಿ ಬಾರಿ ಚುನಾವಣೆ ಗೆದ್ದಾಗ ಅವರು ಮಾಡುವ ಮೊದಲ ಕೆಲಸ ಅಮ್ಮನ ಆಶೀರ್ವಾದ ತೆಗೆದುಕೊಳ್ಳುವುದು. 

ಮೋದಿ ಕುರ್ತಾ ಬ್ರಾಂಡ್ ಬಂದಿದ್ದು ಯಾಕೆ?
 
21.ಅವರು ಪ್ರಚಾರಕರಾಗಿ ಕೆಲಸ ಮಾಡುತ್ತಿದ್ದಾಗ ಸ್ಕೂಟರ್ ಓಡಿಸಲು ಬರುತ್ತಿರಲಿಲ್ಲ.  ಶಂಕರ್ ಸಿಂಗ್ ವಾಘೇಲಾ  ತಮ್ಮ ಸ್ಕೂಟರ್‌ನಲ್ಲಿ ಅವರನ್ನು ಕುಡಿಸಿಕೊಂಡು ಓಡಾಡುತ್ತಿದ್ದರು. 
 
22. ಸಂಘದಲ್ಲಿದ್ದಾಗ ಮೋದಿ ತಮ್ಮ ಕುರ್ತಾದ ತೋಳನ್ನು ಕತ್ತರಿಸಿದ್ದರು. ಬಟ್ಟೆ ಜಾಸ್ತಿ ಹಾಳಾಗಬಾರದೆಂಬುದು ಅವರ ಉದ್ದೇಶವಾಗಿತ್ತು. ಈಗ ತೋಳು ಕತ್ತರಿಸಿದ ಕುರ್ತಾ ಮೋದಿ ಬ್ರಾಂಡ್ ಕುರ್ತಾ ಹೆಸರು ಪಡೆದು ದೇಶದಾದ್ಯಂತ ಜನಪ್ರಿಯತೆ ಪಡೆಯುತ್ತಿದೆ. 
 
23. ಇತರ ಪ್ರಚಾರಕರಿಗಿಂತ ಭಿನ್ನವಾಗಿ ಗಡ್ಡವನ್ನು ಬಿಡುತ್ತಿದ್ದರು ಮತ್ತು  ಸ್ಟ್ರೀಮ್ ಮಾಡಿಸುತ್ತಿದ್ದರು.
 
24. 1975ರ ತುರ್ತುಪರಿಸ್ಥಿತಿಯ ಸಮಯದಲ್ಲಿ ಸರ್ದಾರರ ವೇಷ ಧರಿಸಿ ಒಂದುವರೆ ವರುಷಗಳವರೆಗೆ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದರು. 
 
25. ಅಮೇರಿಕಾದಲ್ಲಿ ನಿರ್ವಹಣೆ ಮತ್ತು ಸಾರ್ವಜನಿಕ ಸಂಬಂಧಗಳ ವಿಷಯದಲ್ಲಿ 3 ತಿಂಗಳ ಕೋರ್ಸ್ ಮಾಡಿದ್ದರು.
 
 
ಮೋದಿ ಯಾರನ್ನು ಆದರ್ಶ ಎಂದು ನಂಬಿದ್ದಾರೆ?
 
26. ಮೋದಿ ತಮ್ಮನ್ನು ತಾವು ಕವಿ ಮತ್ತು ಲೇಖಕ ಎಂದು ಹೇಳಿಕೊಳ್ಳುತ್ತಾರೆ. 
 
27. ಗುಜರಾತಿ ಭಾಷೆಯಲ್ಲಿ ಹಿಂದುತ್ವಕ್ಕೆ ಸಂಬಂಧಿಸಿದ ಅನೇಕ ಲೇಖನಗಳನ್ನು ಬರೆದಿದ್ದಾರೆ. 
 
28. ಮೋದಿ ಸ್ವಾಮಿ ವಿವೇಕಾನಂದರಿಂದ ಬಹಳ ಪ್ರಭಾವಿತರಾಗಿದ್ದಾರೆ. ಗುಜರಾತಿನಲ್ಲಿ ಅವರು ವಿವೇಕಾನಂದ ಸುವ ವಿಕಾಸ ಯಾತ್ರೆಯನ್ನು ಆಯೋಜಿಸಿದ್ದರು. 
 
29. ಅವರು ಶುದ್ಧ ಸಸ್ಯಾಹಾರಿ. ಸಿಗರೇಟ್, ಮದ್ಯವನ್ನು ಅವರು ಮುಟ್ಟಿಯೂ ನೋಡಿಲ್ಲ. 
 
 
ಮೋದಿ ಮತ್ತು ಸಮಯ ಪ್ರಜ್ಞೆ
 
30. ಮೋದಿ ಚಿಕ್ಕಚಿಕ್ಕ ವಿಷಯಕ್ಕೂ ಗಮನ ನೀಡುತ್ತಾರೆ. 
 
31. ಅವರು ಸಮಯಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ. 
 
32. ಕೇವಲ ಮೂರುವರೆ ತಾಸು ಮಲಗುವ ಅವರು 5.30 ಗೆ ಎದ್ದು ಬಿಡುತ್ತಾರೆ. 
 
33. ಲಾಲಕೃಷ್ಣ ಅಡ್ವಾಣಿಯವರನ್ನು ಅವರ ರಾಜಕೀಯ ಗುರು ಎಂದು ಹೇಳಲಾಗುತ್ತದೆ. 
 
34. 1990ರ ದಶಕದಲ್ಲಿ  ಅಡ್ವಾಣಿ ಸೋಮನಾಥನಿಂದ ಪ್ರಾರಂಭಿಸಿದ ಅಯೋಧ್ಯಾ ರಥ ಯಾತ್ರೆಯಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿದ್ದರು. 
 
35. ಮೋದಿ ಸ್ವಭಾವತ ಆಶಾವಾದಿ. ಜನರಿಗೆ ಅರ್ಧ ಗ್ಲಾಸ್ ನೀರು ತುಂಬಿರುವುದು ಕಂಡುಬಂದರೆ, ನನಗೆ ಅರ್ಧ ನೀರು ಮತ್ತರ್ಧ ಗಾಳಿ ತುಂಬಿರುವುದು ಕಂಡು ಬರುತ್ತದೆ. 
 
36. ಗುಜರಾತ್ ಮುಖ್ಯಮಂತ್ರಿಯಾಗಿ ಅವರು ಅನೇಕ ದೇಶಗಳ ಯಾತ್ರೆಯನ್ನು ಮಾಡಿದ್ದಾರೆ. ಅದರಲ್ಲಿ ಚೀನಾಯಾತ್ರೆ ಪ್ರಮುಖವಾದುದು. ಚೀನಾ ಪ್ರಗತಿ ಪಥದಲ್ಲಿ ಬಹಳ ಮುಂದುವರೆದಿದೆ ಎಂಬುದು ಅವರ ಅಭಿಪ್ರಾಯ. 
 
 
ಬ್ರಾಂಡ್ ಅಂಬಾಸಿಡರ್ ಆಗಿದ್ದಕ್ಕೆ ಅಮಿತಾಬ್ ತೆಗೆದುಕೊಂಡ ಹಣವೆಷ್ಟು?
 
37. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವೈಬ್ರಂಟ್ ಗುಜರಾತ್ ಶೃಂಗಸಭೆಯನ್ನು ಆಯೋಜಿಸಿ ವಿದೇಶಿ ಬಂಡವಾಳ ಹೂಡಿಕೆಗೆ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಿದ್ದರು. 
 
38. ಪ್ರವಾಸಿಗರನ್ನು ಆಕರ್ಷಿಸಲು ಅವರು ಬಾಲಿವುಡ್ ಮಹಾನಾಯಕ ಅಮಿತಾಬ್ ಬಚ್ಚನ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದರು. 
 
39. ಇದಕ್ಕೆ ಪ್ರತಿಯಾಗಿ ಅಮಿತಾಬ್ ಒಂದು ಪೈಸೆಯನ್ನು ತೆಗೆದುಕೊಳ್ಳಲಿಲ್ಲ. 
 
40. ಬಂಗಾಲದ ಸಿಂಗೂರನಲ್ಲಿ ಟಾಟಾ ನ್ಯಾನೋ ಕಾರ್ ಪ್ಲಾಂಟ್‌ಗೆ ವಿರೋಧ ವ್ಯಕ್ತವಾದಾಗ, ಗುಜರಾತಿನಲ್ಲಿ ಪ್ಲಾಂಟ್ ನಿರ್ಮಿಸಲು ಟಾಟಾ ಕಂಪನಿಗೆ ಕೇವಲ ಒಂದು ಸಂದೇಶ ಕಳುಹಿಸುವುದರ ಮೂಲಕ ಮೋದಿ ಆಹ್ವಾನಿಸಿದರು- ವೆಲಕಂ ಟು ಗುಜರಾತ್
 
41.ಮೋದಿಯವರಿದೆ ಗಾಳಿಪಟ ಹಾರಿಸುವ ಗೀಳಿದೆ.ರಾಜಕೀಯದ ಗಾಳಿಪಟದಾಟದಂತೆ, ನೈಜ ಗಾಳಿಪಟದಾಟದಲ್ಲು ಕೂಡ ಅವರು ಪರಿಣಿತರು. 
 
ಮೋದಿಗೆ ಗೊತ್ತು ವಿರೋಧಿಗಳನ್ನು ಮಿತ್ರರನ್ನಾಗಿಸಿಕೊಳ್ಳುವ ಬಗೆ. 
 
 
42. ಗುಜರಾತ್ ದಂಗೆಯ ಕಪ್ಪುಚುಕ್ಕೆ ಇಂದಾಗಿ 2005ರಲ್ಲಿ ಅಮೇರಿಕಾ ಅವರಿಗೆ ವೀಸಾ ನೀಡಲು ನಿರಾಕರಿಸಿತು. 
 
43. ವಿಶೇಷ ಮಾಧ್ಯಮಗಳಲ್ಲಿ ಕೂಡ ಮೋದಿ ಸಕ್ರಿಯರಾಗಿದ್ದಾರೆ. ಟ್ವಿಟ್ಟರ್ ಮತ್ತು ಫೇಸ್ಬುಕ್‌ನಲ್ಲಿ ಅವರಿಗೆ ಲಕ್ಷಾಂತರ ಅನುಯಾಯಿಗಳಿದ್ದಾರೆ. 
 
44. 31, ಅಗಸ್ಟ್ 2012ರಲ್ಲಿ  ವೆಬ್ ಕ್ಯಾಮ್ ಮೂಲಕ ಜನರ ಪ್ರಶ್ನೆಗಳಿಗೆ ಮೋದಿ ಉತ್ತರಿಸಿದರು. ಕೇವಲ ದೇಶವಾಸಿಗಳಷ್ಟೇ ಅಲ್ಲ, ವಿದೇಶಗಳಿಂದಲು ಕೂಡ ಪ್ರಶ್ನೆಗಳನ್ನು ಕೇಳಲಾಗಿತ್ತು. 
 
45. ಗುಜರಾತಿನ ಕಟ್ಟಾ ಮುಸ್ಲಿಂ ಮೋದಿ ವಿರೋಧಿಗಳಾಗಿದ್ದರು. ಅವರಲ್ಲೊಬ್ಬ ಜಪ್ಪಾರ ಸಾರ್ಸೇವಾಲಾ ಎಂಬುವವರು ಮೋದಿ ಮುಖ್ಯಮಂತ್ರಿಯಾದಾಗ ಲಂಡನ್‌ಗೆ ವಲಸೆ ಹೋಗಿ ಅಲ್ಲಿ ಮೋದಿ ವಿರುದ್ಧ ಪ್ರಚಾರ ಪ್ರಾರಂಭಿಸಿದರು. ಆದರೆ ನಂತರ ಒಮ್ಮೆ ಮೋದಿಯವರನ್ನು ಭೇಟಿಯಾದ ಅವರು ಮೋದಿಗೆ ತುಂಬ ಹತ್ತಿರದವರಾದರು. 
 
ಲೋಕಸಭಾ ರಣರಂಗದಲ್ಲಿ ಗೆಲ್ಲಲು ಮೋದಿ ಮಾಡಿದ್ದೇನು?
 
46. 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಮೋದಿ ವಿಶೇಷ ಮಾಧ್ಯಮಗಳನ್ನು ಅತಿಯಾಗಿ ಬಳಸಿಕೊಂಡರು.
 
47. ಪ್ರಚಾರ ಸಮಿತಿಯೊಂದನ್ನು ರಚಿಸಿ ಅದಕ್ಕೆ ಸೆಂಟರ್ ಫಾರ್ ಅಂಕೌಂಟೇಬಲ್ ಗವರ್ನೆನ್ಸ್ ಎಂದು ಹೆಸರಿಟ್ಟಿದ್ದರು. ಪ್ರಚಾರದ ಸಂಪೂರ್ಣ ಜವಾಬ್ದಾರಿ ಇದರ ಕೈಯಲಿತ್ತು. 
 
48.  ಲೋಕಸಭೆಯ ಉಸ್ತುವಾರಿ ವಹಿಸಿಕೊಂಡ ನಂತರ ಜನರಲ್ಲಿ ಅವರ ಕುರಿತಾದ ಆಸಕ್ತಿ ಮತ್ತೂ ಹೆಚ್ಚಾಯಿತು. 2 ತಿಂಗಳಲ್ಲಿ ಅವರ ಕುರಿತು 40ಕ್ಕಿಂತ ಹೆಚ್ಚು  ಜೀವನಚರಿತ್ರೆಗಳು ಪ್ರಕಟವಾಗಿವೆ. 
 
49. ಬಾಲಿವುಡ್‌ನ ದೊಡ್ಡ ದೊಡ್ಡ ಕಲಾವಿದರು ಅವರ ಅಭಿಮಾನಿಗಳು. 
 
50. ಇಂದಿಗೂ ಕೂಡ ಮೋದಿ ತಮ್ಮ ಸಹೋದರ, ಸಹೋದರಿಯರಿಂದ ಪ್ರತ್ಯೇಕವಾಗಿ ವಾಸಿಸುತ್ತಾರೆ. 
 

Share this Story:

Follow Webdunia kannada