Select Your Language

Notifications

webdunia
webdunia
webdunia
webdunia

ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರ ಶ್ರೀ ಗೋಸಂದೇಶ

ಗೋಚಾತುರ್ಮಾಸ್ಯದಲ್ಲಿ ರಾಘವೇಶ್ವರ ಶ್ರೀ ಗೋಸಂದೇಶ
ಬೆಂಗಳೂರು , ಬುಧವಾರ, 3 ಆಗಸ್ಟ್ 2016 (19:36 IST)
ನಾವೆಲ್ಲರೂ ಆಂಜನೇಯರಾಗಬೇಕಿದೆ. ಯಾಕೆಂದರೆ ಗೋಮಾತೆ ಅಂದಿನ ಸೀತೆಯ ಹಾಗೆ ಶೋಕದಲ್ಲಿ ಮುಳುಗಿದ್ದಾಳೆ. ಗೋ ಮಾತೆಯ ಶೋಕವನ್ನು ನಾಶ ಮಾಡಬೇಕಿದೆ. ಆಂಜನೇಯ ಸೀತಾಮಾತೆಯನ್ನು ರಕ್ಷಿಸಿದ ಹಾಗೆ ನಾವೆಲ್ಲ ಗೋಮಾತೆಯನ್ನು ರಕ್ಷಿಸೋಣ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. 
ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಜಗದೀಶನಾಡಿದ ಜಗನ್ನಾಟಕಕ್ಕೆ ರಾಮಾಯಣ ಎಂದು ಹೆಸರು. ಸೂತ್ರರೂ ಕೂಡ ಪಾತ್ರವಾಗುತ್ತಾರೆ ಅದರಲ್ಲಿ. ಎಲ್ಲ ಪಾತ್ರಗಳಲ್ಲಿ ಅತ್ಯಂತ ಸುಂದರ ಪಾತ್ರ ಎಂದರೆ ಹನುಮಂತನದ್ದು. ಹನುಮಂತನ ಆಗಮನದವರೆಗೆ ದುಃಖದ ಸನ್ನಿವೇಶಗಳು, ಹನುಮಂತನ ಆಗಮನವಾದ ಮೇಲೆ ಎಲ್ಲ ಗೆಲುವುಗಳು. ರಾಮನ ಬದುಕಿನಲ್ಲೆ ಗೆಲುವನ್ನು ತಂದ ಹನುಮ, ನಮ್ಮೆಲ್ಲರ ಜೀವನದಲ್ಲಿ ಗೆಲುವನ್ನೇ ತರಬಲ್ಲ. ನಾವೆಲ್ಲ ಹನುಮನಾದರ್ಶವನ್ನು ಎತ್ತಿಹಿಡಿದು ಗೋಮಾತೆಯನ್ನು ರಕ್ಷಿಸೋಣ ಎಂದು ನುಡಿದರು.
 
ಬೆಳಗೂರಿನ ಮಾರುತಿಪೀಠದ ಅವಧೂತ ಬಿಂಧುಮಾಧವ ಶರ್ಮ ಸ್ವಾಮೀಜಿಯವರು, ನಮ್ಮ ಮತ್ತು ಪರಮಪೂಜ್ಯ ರಾಘವೇಶ್ವರಭಾರತಿ ಸ್ವಾಮಿಗಳ ಭೇಟಿ ಜೀವಾತ್ಮ ಮತ್ತು ಪರಮಾತ್ಮನ ಸಮ್ಮಿಲನದ ಸಂಕೇತ. ಇದು ನಮ್ಮ ಬಹು ಜನ್ಮದ ಪುಣ್ಯ ಎಂದ ಅವರು, ಗೋವು ಅಂದರೆ ಧರ್ಮ, ಧರ್ಮವನ್ನು ಉದ್ಧಾರ ಮಾಡಲಿಕ್ಕಾಗಿ, ಜಗತ್ತಿಗೆ ಒಳಿತು ಮಾಡಲು ಶ್ರೀಗಳು ಅವತರಿಸಿದ್ದಾರೆ. ನಮ್ಮನ್ನು ರಕ್ಷಿಸುವ ಮಾತೆಯರಾದ ಗೋವು ಹಾಗೂ ಗಾಯತ್ರಿಯನ್ನು ನಾವು ಮರೆತಿದ್ದೇವೆ, ಹಾಗಾಗಿಯೇ ಪ್ರಪಂಚಕ್ಕೆ ಹೀನತ್ವ ಬಂದಿರುವುದು. ಗೋರಕ್ಷಣೆಯ ಮೂಲಕ ಧರ್ಮವನ್ನು ಕಾಯೋಣ ಎಂದರು.
 
ದೇಶಿ ಗೋವಿನ ಹಾಲನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡುತ್ತಿರುವ ಮಾಧವ ಎಂ. ಎಸ್. ಹೆಬ್ಬಾರ್ ಅವರಿಗೆ ಗೋಸೇವಾ ಪುರಸ್ಕಾರವನ್ನು ನೀಡಲಾಯಿತು.
 
ಶ್ರೀಭಾರತೀಪ್ರಕಾಶನವು ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ಅವಧೂತ ಬಿಂಧುಮಾಧವ ಶರ್ಮ ಸ್ವಾಮೀಜಿ ಹಾಗೂ ಐ.ಡಿ ಗಣಪತಿ ಬರೆದ ಲೋಕಶಂಕರ ಯಕ್ಷಗಾನ ಪ್ರಸಂಗ ಪುಸ್ತಕವನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮದಲ್ಲಿ ಪ್ರದ್ಯುಮ್ನ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. 
 
ಕೋಗೋಡು, ಸಿರಿವಂತೆ, ಅರಳಗೋಡು ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಸಿಗಂದೂರು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಶೇಷಗಿರಿ ಭಟ್, ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ವೆಂಕಟರಮಣ ಭಟ್ ದಂಪತಿಗಳು ಸಭಾಪೂಜೆಯನ್ನು ನೆರವೇರಿಸಿದರು. ಲೋಹಿತ ಶರ್ಮಾ ನಿರೂಪಿಸಿದರು. 
 
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
ಕೋಟ್ಸ್
ಹನುಮಂತನ ಆಗಮನದವರೆಗೆ ದುಃಖದ ಸನ್ನಿವೇಶಗಳು, ಹನುಮಂತನ ಆಗಮನವಾದ ಮೇಲೆ ಎಲ್ಲ ಗೆಲುವುಗಳು. ರಾಮನ ಬದುಕಿನಲ್ಲೆ ಗೆಲುವನ್ನು ತಂದ ಹನುಮ, ನಮ್ಮೆಲ್ಲರ ಜೀವನದಲ್ಲಿ ಗೆಲುವನ್ನೇ ತರಬಲ್ಲ. ನಾವೆಲ್ಲ ಹನುಮನಾದರ್ಶವನ್ನು ಎತ್ತಿಹಿಡಿದು ಗೋಮಾತೆಯನ್ನು ರಕ್ಷಿಸೋಣ
 
ಶ್ರೀರಾಘವೇಶ್ವರಶ್ರೀಗಳು
ನಮ್ಮನ್ನು ರಕ್ಷಿಸುವ ಮಾತೆಯರಾದ ಗೋವು ಹಾಗೂ ಗಾಯತ್ರಿಯನ್ನು ನಾವು ಮರೆತಿದ್ದೇವೆ, ಹಾಗಾಗಿಯೇ ಪ್ರಪಂಚಕ್ಕೆ ಹೀನತ್ವ ಬಂದಿರುವುದು. ಗೋರಕ್ಷಣೆಯ ಮೂಲಕ ಧರ್ಮವನ್ನು ಕಾಯೋಣ
              ಅವಧೂತ ಬಿಂದುಮಾಧವ ಶರ್ಮಶ್ರೀಗಳು
ಮಾಧವ ಎಂ. ಎಸ್. ಹೆಬ್ಬಾರ್ ಅವರಿಗೆ ಗೋಸೇವಾ ಪುರಸ್ಕಾರ
           ಲೋಕಶಂಕರ ಯಕ್ಷಗಾನ ಪ್ರಸಂಗ ಪುಸ್ತಕ ಲೋಕಾರ್ಪಣೆ
ಪ್ರದ್ಯುಮ್ನ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ
 
ಇಂದಿನ ಕಾರ್ಯಕ್ರಮ (04.08.2016):
 
ಬೆಳಗ್ಗೆ 7.00 ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಅಪರಾಹ್ನ 3.30 :  
ಗೋಸಂದೇಶ : ಗೋಆಧಾರಿತ ಕೃಷಿ - ಅಶೋಕ್ ಇಂಗವಲೆ
ಲೋಕಾರ್ಪಣೆ : ಜೇನು ಪ್ರಪಂಚ ಪುಸ್ತಕ - ಎಂ. ಈ. ಸತ್ಯನಾರಾಯಣ ಭಟ್, ಮಂಕಳಲೆ
 ಸಾಧನಾಪಂಚಕ ಪ್ರವಚನಮಾಲಿಕೆ - ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು - ಅಶೋಕ್ ಇಂಗವಲೆ
ಸಂತ ಸಂದೇಶ : ಮ.ನಿ.ಪ್ರ ಶಿವಾನುಭವಚರವರ್ಯ ಶ್ರೀಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು, ಸೋಮೇಕಟ್ಟೆ ಶ್ರೀ ಕಾಡಸಿದ್ಧೇಶ್ವರಮಠ, ನೊಣವಿನಕೆರೆ, ತಿಪಟೂರು
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ - ಗಾಯನ : ಗರ್ತಿಕೆರೆ ರಾಘಣ್ಣ, ತಬಲಾ : ಪೂರ್ಣಿಮಾ ಶಮಂತ್ 
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

2017ರಲ್ಲಿ ಉ,ಪ್ರದೇಶದಲ್ಲಿ ಬಿಜೆಪಿ ಸರಕಾರ ರಚನೆಗೆ ಶೇ.32 ರಷ್ಟು ಜನರ ಒಲವು