Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ವಾದ್ರಾ ಆಸ್ಪತ್ರೆಗೆ ದಾಖಲು

ಪ್ರಿಯಾಂಕಾ ವಾದ್ರಾ ಆಸ್ಪತ್ರೆಗೆ ದಾಖಲು
ನವದೆಹಲಿ , ಶನಿವಾರ, 26 ಆಗಸ್ಟ್ 2017 (09:03 IST)
ನವದೆಹಲಿ: ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ವಾದ್ರಾಗೆ ಡೆಂಗ್ಯೂ ಜ್ವರ ತಗುಲಿದ್ದು, ಚಿಕಿತ್ಸೆಗಾಗಿ  ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

 
ಆಗಸ್ಟ್ 23 ರಂದೇ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರಂಭದಲ್ಲಿ ಸಾಮಾನ್ಯ ಜ್ವರವೆಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇದೀಗ ಡೆಂಗ್ಯೂ ತಗಲಿರುವುದು ಪತ್ತೆಯಾಗಿದೆ.

ಶ್ವಾಸಕೋಶ ತಜ್ಞ ಆರೂಪ್ ಬಸು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ದೆಹಲಿಯಲ್ಲಿ ಡೆಂಗ್ಯೂ  ಜ್ವರ ವ್ಯಾಪಕವಾಗಿದೆ. ಇದುವರೆಗೆ ದೆಹಲಿಯಲ್ಲಿ ಸುಮಾರು 657 ಮಂದಿ ಡೆಂಗ್ಯೂಗೆ ತುತ್ತಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ಟೀಂ ಇಂಡಿಯಾದಲ್ಲಿ ಮಧ್ಯರಾತ್ರಿ ನಡೆಯಿತಂತೆ ಆ ಘಟನೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾಜಪೇಯಿಗೆ ಬಂದಿದ್ದ ಅನಾಮಧೇಯ ಪತ್ರ ದೇರಾ ಮುಖ್ಯಸ್ಥನ ಕಾಮಕಾಂಡ ಬಿಚ್ಚಿಟ್ಟಿತ್ತು..!