Select Your Language

Notifications

webdunia
webdunia
webdunia
webdunia

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಪ್ರಿಯಾಂಕ ಗಾಂಧಿ

Priyanka

Sampriya

ನವದೆಹಲಿ , ಸೋಮವಾರ, 29 ಏಪ್ರಿಲ್ 2024 (14:46 IST)
Photo Courtesy X
ನವದೆಹಲಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ  ಮಹಿಳೆಯರ ಜತೆ ನಡೆಸಿದ ದೌರ್ಜನ್ಯದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ವಹಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ.

ಹಾಸನದ ಸಂಸದ ಪ್ರಜ್ವಲ್ ಅವರ ಎನ್ನಲಾದ ಅಶ್ಲೀಲ ಪೆನ್‌ಡ್ರೈನ್ ಪ್ರಕರಣ ರಾಜಕೀಯ ವಲಯದಲ್ಲಿ ಮುಜುಗರಕ್ಕೆ ಕಾರಣವಾಗಿದೆ.

ಈ ಕುರಿತಂತೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಪ್ರಿಯಾಂಕಾ ಗಾಂಧಿ ಅವರು, 'ಪ್ರಧಾನಿ ಅವರು ಯಾರ ಭುಜದ ಮೇಲೆ ಕೈಯಿಟ್ಟು ಫೋಟೊ ತೆಗೆಸಿಕೊಂಡಿದ್ದರೋ, 10 ದಿನಗಳ ಹಿಂದೆ ಯಾರ ಪರ ಪ್ರಚಾರ ಮಾಡಿದ್ದರೋ, ಯಾರನ್ನು ವೇದಿಕೆ ಮೇಲೆ ಹೊಗಳಿದ್ದರೋ ಕರ್ನಾಟಕದ ಆ ನಾಯಕ ಇಂದು ತಲೆಮರೆಸಿಕೊಂಡಿದ್ದಾನೆ' ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಆತನ(ಪ್ರಜ್ವಲ್ ರೇವಣ್ಣ) ಘೋರ ಅಪರಾಧಗಳ ಬಗ್ಗೆ ಕೇಳಿದರೆ ಹೃದಯ ಕಂಪಿಸುತ್ತದೆ. ನೂರಾರು ಮಹಿಳೆಯರ ಬದುಕನ್ನು ಹಾಳು ಮಾಡಿದ್ದಾನೆ. ಮೋದಿ ಅವರೇ ಇನ್ನೂ ಸುಮ್ಮನಿರುತ್ತೀರಾ ನೀವು ಎಂದು ಪ್ರಶ್ನಿಸಿದ್ದಾರೆ.

ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೇ ಸಂಸದ ಪ್ರಜ್ವಲ್ ರೇವಣ್ಣ ತಲೆಮರೆಸಿಕೊಂಡು ವಿದೇಶಕ್ಕೆ ಹೋಗಿದ್ದಾರೆ.  ಈಗಾಗಲೇ ತನಿಖೆಯನ್ನು ಸರ್ಕಾರ ಎಸ್‌ಐಟಿಗೆ ವಹಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೇವಣ್ಣ ಕುಟುಂಬವೇ ಬೇರೆ, ಪ್ರಜ್ವಲ್ ವಿಚಾರದಲ್ಲಿ ಕಿಡಿ ಕಿಡಿಯಾದ ಎಚ್ ಡಿ ಕುಮಾರಸ್ವಾಮಿ