Select Your Language

Notifications

webdunia
webdunia
webdunia
webdunia

ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಲಂಕಾದ ಕ್ರೀಡಾಂಗಣ ಉದ್ಘಾಟಿಸಲಿರುವ ಪ್ರಧಾನಿ

ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಲಂಕಾದ ಕ್ರೀಡಾಂಗಣ ಉದ್ಘಾಟಿಸಲಿರುವ ಪ್ರಧಾನಿ
ನವದೆಹಲಿ , ಶನಿವಾರ, 18 ಜೂನ್ 2016 (11:09 IST)
ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಜಂಟಿಯಾಗಿ ಇಂದು ಶ್ರೀಲಂಕಾದ ಜಾಫ್ನಾದಲ್ಲಿ ಕ್ರೀಡಾಂಗಣವನ್ನು ಉದ್ಘಾಟಿಸಲಿದ್ದಾರೆ. ಇತ್ತೀಚಿಗೆ ಭಾರತ ಈ ಕ್ರೀಡಾಂಗಣವನ್ನು ನವೀಕರಿಸಿತ್ತು. 

ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಈ ಕಾರ್ಯಕ್ರಮದಲ್ಲಿ ಸೇರಿಕೊಳ್ಳಲಿದ್ದಾರೆ. 
 
ದುರೈಯಪ್ಪ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ 8,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. 
 
ಜಾಫ್ನಾದ ಮಾಜಿ ಮೇಯರ್ ಅಲ್ಫ್ರೆಡ್ ತಂಬಿರಾಜ ದುರೈಯಪ್ಪ ಅವರ ಗೌರವಾರ್ಥ ಕ್ರೀಡಾಂಗಣಕ್ಕೆ ಅವರದೇ ಹೆಸರನ್ನು ಇಡಲಾಗಿದ್ದು 7 ಕೋಟಿ ರೂಪಾಯಿ ವೆಚ್ಚದಲ್ಲಿ ಭಾರತ ಇದನ್ನು ನಿರ್ಮಿಸಿಕೊಟ್ಟಿದೆ. 
 
ಜೂನ್ 21 ರಂದು ನಡೆಯಲಿರುವ ದ್ವಿತೀಯ ಅಂತರಾಷ್ಟ್ರೀಯ ಯೋಗಾದಿನದ ಪ್ರಯುಕ್ತ ಕ್ರೀಡಾಂಗಣದಲ್ಲಿಂದು ಯೋಗ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೃದಯವಿದ್ರಾವಕ: ಆಟವಾಡಲು ಕಾರ್ ಒಳಹೊಕ್ಕಿದವ ಶವವಾದ