Select Your Language

Notifications

webdunia
webdunia
webdunia
webdunia

ಅಯೋಧ್ಯೆಗೆ ಬಂದ ಪ್ರಧಾನಿ ಮೋದಿಗೆ ಹೂ ಮಳೆ ಸ್ವಾಗತ ಕೋರಿದ ಜನ

ಅಯೋಧ್ಯೆಗೆ ಬಂದ ಪ್ರಧಾನಿ ಮೋದಿಗೆ ಹೂ ಮಳೆ ಸ್ವಾಗತ ಕೋರಿದ ಜನ
ಅಯೋಧ್ಯೆ , ಶನಿವಾರ, 30 ಡಿಸೆಂಬರ್ 2023 (11:52 IST)
Photo Courtesy: Twitter
ಅಯೋಧ್ಯೆ: ಪ್ರಧಾನಿ ಮೋದಿ ಇಂದು ಸಾವಿರಾರು ಕೋಟಿ ರೂ.ಗಳ ಯೋಜನೆ ಉದ್ಘಾಟಿಸಲು ದೇವಾಲಯ ನಗರಿ ಅಯೋಧ್ಯೆಗೆ ಬಂದಿಳಿದಿದ್ದಾರೆ.

ಅಯೋಧ್ಯೆಗೆ ಬಂದಿಳಿದ ಪ್ರಧಾನಿ ಮೋದಿಯವರನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖುದ್ದಾಗಿ ಬರಮಾಡಿಕೊಂಡಿದ್ದಾರೆ. ಇಂದು ಅಯೋಧ್ಯೆಯಲ್ಲಿ 15,700 ಕೋಟಿ ರೂ. ಗಳ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬೆನ್ನಲ್ಲೇ ಸಾರಿಗೆ ವ್ಯವಸ್ಥೆ ಸುಧಾರಣೆಗೆ ರೈಲ್ವೇ ನಿಲ್ದಾಣ ಮತ್ತು ವಿಮಾನ ನಿಲ್ದಾಣ ಇಂದು ಲೋಕಾರ್ಪಣೆಯಾಗುತ್ತಿದೆ. ಅಯೋಧ್ಯೆಗೆ ಬಂದ ಪ್ರಧಾನಿ ಮೋದಿ ರೋಡ್ ಶೋ ವೇಳೆ ಜನ ಹೂ ಮಳೆ ಸುರಿಸಿ ಸ್ವಾಗತ ನೀಡಿದ್ದಾರೆ.

ಇಂದು ಮಧ‍್ಯಾಹ್ನ ಮೋದಿ ಜನರನ್ನುದ್ದೇಶಿಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ. ಅಲ್ಲದೆ, ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯಗಳ ಪರಿಶೀಲನೆಯನ್ನೂ ನಡೆಸಲಿದ್ದಾರೆ. ಜನವರಿ 22 ಕ್ಕೆ ರಾಮಮಂದಿರ ಲೋಕಾರ್ಪಣೆಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದಿಂದಲೇ ಉದ್ಯೋಗ ಮೇಳ ಎಲ್ಲಿ? ಯಾವಾಗ?