Select Your Language

Notifications

webdunia
webdunia
webdunia
webdunia

ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಘೋಷಣೆಗಳು

Interim budget 2024

Krishnaveni K

ನವದೆಹಲಿ , ಗುರುವಾರ, 1 ಫೆಬ್ರವರಿ 2024 (11:51 IST)
ನವದೆಹಲಿ: ಕೇಂದ್ರ ಮಧ‍್ಯಂತರ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ.

ಬಜೆಟ್ ನಲ್ಲಿ ಮಹಿಳೆಯರು, ರೈತರು, ಬಡವರ ಸುಧಾರಣೆ ಮತ್ತು ಮೂಲಭೂತ ಸೌಕರ್ಯಾಭಿವೃದ್ಧಿಗೆ ನಿರ್ಮಲಾ ಸೀತಾರಾಮನ್ ಸಾಕಷ್ಟು ಅನುದಾನ ಘೋಷಣೆ ಮಾಡಿದ್ದಾರೆ. ಜೊತೆಗೆ ವಿದ್ಯುತ್, ಉದ್ಯೋಗ, ಸಾಲ ಯೋಜನೆಗಳ ಮೂಲಕ ಚುನಾವಣೆಗೆ ಮೊದಲು ಜನರನ್ನು ಸೆಳೆಯಲು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಪ್ರವಾಸೋದ್ಯಮ, ಸಾರಿಗೆ, ವಿಮಾನ, ರೈಲ್ವೇ ಯೋಜನೆಗಳಿಗೆ ಸಾಕಷ್ಟು ಹಣ ಮೀಸಲಿಡಲಾಗಿದೆ.

  • ಐದು ವರ್ಷಗಳಲ್ಲಿ
  • ಸೋಲಾರ್ ಮೂಲಕ ಪ್ರತಿ ಮನೆಗೂ ಉಚಿತ ವಿದ್ಯುತ್
  • ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ಆತ್ಮನಿರ್ಭರತೆ
  • ಇಂಧ್ರ ಧನುಷ್ ಯೋಜನೆ ದೇಶದಾದ್ಯಂತ ವಿಸ್ತರಣೆ
  • ಡೈರಿಗಳಿಗೆ ಪ್ರೋತ್ಸಾಹ ಧನ
  • ಮೀನುಗಾರಿಕೆಯಲ್ಲಿ 55 ಲಕ್ಷ ಹೊಸ ಉದ್ಯೋಗ ಸೃಷ್ಟಿ
  • ಆತ್ಮ ನಿರ್ಭರ ಆಯಿಲ್ ಸೀಡ್ ಉತ್ಪಾದನೆ ಯೋಜನೆ
  • ಆಹಾರ ಧಾನ್ಯ, ಸಂಸ್ಕರಣೆ, ಶೇಖರಣೆ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ
  • ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಲಖ್ ಪತಿ ದೀದಿ ಯೋಜನೆ
  • ಎಲ್ಲಾ ರೀತಿಯ ಸಂಶೋಧನೆಗಳಿಗೆ ಬಡ್ಡಿ ರಹಿತ ಸಾಲ ಘೋಷಣೆ
  • ಪ್ರತಿ ಮನೆಗೂ 300 ಯೂನಿಟ್  ವಿದ್ಯುತ್
  • ಪಿಎಂ ಆವಾಸ್ ಯೋಜನೆಯಡಿ 3 ಕೋಟಿ ಮನೆ ನಿರ್ಮಾಣ
  • ಸಾಲ ನೀಡಲು 1 ಲಕ್ಷ ಕೋಟಿ ವಿಶೇಷ ನಿಧಿ ಸ್ಥಾಪನೆ
  • ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರತೆಗೆ ಆದ್ಯತೆ
  • ಸಾಮಾನ್ಯ ದರ್ಜೆಯ ರೈಲು ಹಳಿಗಳನ್ನು ವಂದೇ ಭಾರತ್ ಎಕ್ಸ್ ಪ್ರೆಸ್ ದರ್ಜೆಗೆ ಏರಿಸಲು ಕ್ರಮ
  • ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ
  • 3 ಪ್ರಮುಖ ರೈಲ್ವೆ ಕಾರಿಡಾರ್ ನಿರ್ಮಾಣ ಗುರಿ
  • ಗೂಡ್ಸ್ ರೈಲುಗಳಿಗೆ ಪ್ರತ್ಯೇಕ ಕಾರಿಡಾರ್
  • ಮೆಟ್ರೋ ಮತ್ತು ನಮೋ ಭಾರತ್ ಮಾರ್ಗ ಹೆಚ್ಚಳ
  • ರಸ್ತೆ, ರೈಲು, ಬಂದರು ಸಂಪರ್ಕಕ್ಕೆ ಕಾರಿಡಾರ್ ನಿರ್ಮಾಣ
  • ಏರ್ ಪೋರ್ಟ್ ಗಳ ಆಧುನೀಕರಣ, ಹೊಸ ಏರ್ ಪೋರ್ಟ್ ಗಳ ನಿರ್ಮಾಣ
  • ಲಕ್ಷದ್ವೀಪ ಟೂರಿಸಂ ಅಭಿವೃದ್ಧಿಗೆ ಯೋಜನೆ
  • ಪ್ರವಾಸೋದ್ಯಮ ತಾಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್: ಮೋದಿ ಸರ್ಕಾರ ಗ್ಯಾರಂಟಿಗಳೇನು