Select Your Language

Notifications

webdunia
webdunia
webdunia
webdunia

ಪ್ರಸಾರ ಭಾರತಿ: ನವನೀತ್ ಕುಮಾರ್ ಸೆಹಗಲ್ ನೂತನ ಸಾರಥಿ

ಪ್ರಸಾರ ಭಾರತಿ: ನವನೀತ್ ಕುಮಾರ್ ಸೆಹಗಲ್ ನೂತನ ಸಾರಥಿ

Sampriya

ನವದೆಹಲಿ , ಶನಿವಾರ, 16 ಮಾರ್ಚ್ 2024 (20:47 IST)
Photo Courtesy Facebook
ನವದೆಹಲಿ: ಪ್ರಸಾರ ಭಾರತಿ ನೂತನ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ನವನೀತ್‌ ಕುಮಾರ್‌ ಸೆಹಗಲ್‌ ಅವರನ್ನು ನೇಮಕ ಮಾಡಲಾಗಿದೆ. 
 
ಪ್ರಸಾರ ಭಾರತಿ ಅಧ್ಯಕ್ಷರಾಗಿದ್ದ ಎ. ಸೂರ್ಯಪ್ರಕಾಶ್‌ ಅವರ ಕರ್ತವ್ಯಾವಧಿಯು 2020ರ ಫೆಬ್ರುವರಿಯಲ್ಲಿ ಮುಕ್ತಾಯಗೊಂಡಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಹುದ್ದೆ ಖಾಲಿ ಇದೆ. 
 
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು  ನವನೀತ್‌ ಕುಮಾರ್‌ ಸೆಹಗಲ್ ಅವರನ್ನು ಪ್ರಸಾರ ಭಾರತಿ ಮಂಡಳಿಯ ಮುಖ್ಯಸ್ಥರಾಗಿ ನೇಮಕ ಮಾಡಿದ್ದಾರೆ. 
 
ಸೆಹಗಲ್‌ ಅವರ ಕರ್ತವ್ಯಾವಧಿಯು ಅವರು ಕರ್ತವ್ಯ ವಹಿಸಿಕೊಂಡ ಮೊದಲ ದಿನದಿಂದ ಮುಂದಿನ ಮೂರು ವರ್ಷ ಅಥವಾ ಅವರಿಗೆ 70 ವರ್ಷ ವಯಸ್ಸಾಗುವವರೆಗೆ ಇರಲಿದೆ ಎಂದು ಆದೇಶ ಪ್ರತಿಯಲ್ಲಿ ವಿವರಿಸಲಾಗಿದೆ. 
 
ಅಧ್ಯಕ್ಷರ ಆಯ್ಕೆಗಾಗಿ ರಾಜ್ಯಸಭೆ ಸಭಾಪತಿ ಜಗದೀಪ್‌ ಧನಕರ್‌ ಅವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು. ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ ಮತ್ತು ರಾಷ್ಟ್ರಪತಿ ಅವರಿಂದ ನಾಮನಿರ್ದೇಶನಗೊಂಡ ಒಬ್ಬರು ಸದಸ್ಯರು ಆಯ್ಕೆ ಸಮಿತಿಯಲ್ಲಿದ್ದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ 'ಜಾಕಿ' ಸಿನಿಮಾ ರಿರಿಲೀಸ್‌: 1 ಕೋಟಿ ಕಲೆಕ್ಷನ್‌ನೊಂದಿಗೆ ಹೌಸ್‌ಫುಲ್‌ ಪ್ರದರ್ಶನ