Select Your Language

Notifications

webdunia
webdunia
webdunia
webdunia

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಗೆ ತೆಲಂಗಾಣ ಕಾಂಗ್ರೆಸ್ ನ ನಾಯಕತ್ವ

ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಗೆ ತೆಲಂಗಾಣ ಕಾಂಗ್ರೆಸ್ ನ ನಾಯಕತ್ವ
ಹೈದರಾಬಾದ್ , ಶನಿವಾರ, 1 ಡಿಸೆಂಬರ್ 2018 (09:52 IST)
ಹೈದರಾಬಾದ್: ಮಾಜಿ ಕ್ರಿಕೆಟಿಗ, ರಾಜಕಾರಣಿ ಮೊಹಮ್ಮದ್ ಅಜರುದ್ದೀನ್ ರನ್ನು ತೆಲಂಗಾಣ ಕಾಂಗ್ರೆಸ್ ಘಟಕದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.


ತೆಲಂಗಾಣದಲ್ಲಿ ಡಿಸೆಂಬರ್ 7 ರಂದು ವಿಧಾನ ಸಭೆಗೆ ಚುನಾವಣೆ ನಡೆಯಲಿದ್ದು, ಇದಕ್ಕೂ ಮೊದಲು ಮಾಜಿ ಕ್ರಿಕೆಟಿಗನಿಗೆ ದೊಡ್ಡ ಜವಾಬ್ಧಾರಿಯನ್ನು ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ವಹಿಸಿದ್ದಾರೆ.

ಈಗಾಗಲೇ ಎರಡು ಬಾರಿ ಕಾಂಗ್ರೆಸ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಜರುದ್ದೀನ್ ಒಮ್ಮೆ ಗೆದ್ದು, ಒಮ್ಮೆ ಸೋತಿದ್ದಾರೆ. ಹೈದರಾಬಾದ್ ಮೂಲದವರಾದ ಅಜರುದ್ದೀನ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ. ಅದಕ್ಕೂ ಮೊದಲು ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಮುನ್ನಡೆಸುವ ಜವಾಬ್ಧಾರಿ ಟೀಂ ಇಂಡಿಯಾದ ಮಾಜಿ ನಾಯಕನ ಹೆಗಲಿಗೇರಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

17 ವರ್ಷದ ಬಾಲಕನನ್ನು ಮದುವೆಯಾದ ಯುವತಿ ಅರೆಸ್ಟ್