Select Your Language

Notifications

webdunia
webdunia
webdunia
webdunia

ಆಧಾರ ಕಾರ್ಡ್ ಯಾವುದಕ್ಕೆ ಬೇಕು ಯಾವುದಕ್ಕೆ ಬೇಡ: ಇಲ್ಲಿದೆ ಡಿಟೇಲ್ಸ್

ಆಧಾರ ಕಾರ್ಡ್ ಯಾವುದಕ್ಕೆ ಬೇಕು ಯಾವುದಕ್ಕೆ ಬೇಡ: ಇಲ್ಲಿದೆ ಡಿಟೇಲ್ಸ್
ಬೆಂಗಳೂರು , ಬುಧವಾರ, 26 ಸೆಪ್ಟಂಬರ್ 2018 (14:00 IST)
ನವದೆಹಲಿ:  ಕೆಲವು ಬದಲಾವಣೆಗಳೊಂದಿಗೆ ಕೇಂದ್ರ ಸರ್ಕಾರದ ಆಧಾರ ಕಾರ್ಡ್ ಜಾರಿ ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಆಧಾರ ಕಾರ್ಡ್  ಲಿಂಕ್ ಯಾವುದೇಕ್ಕೆ ಅಗತ್ಯವಾಗಿದೆ ಯಾವುದಕ್ಕೆ ಅಗತ್ಯವಾಗಿಲ್ಲ  ಎನ್ನುವ ಬಗ್ಗೆ ತೀರ್ಪಿನಲ್ಲಿ ಸ್ಪಷ್ಟನೆ ನೀಡಿದೆ. ಯಾವುದಕ್ಕೆ ಆಧಾರ ಕಾರ್ಡ್ ಬೇಕು, ಯಾವುದಕ್ಕೆ ಆಧಾರ ಕಾರ್ಡ್ ಬೇಡ ಎನ್ನುವ ಬಗ್ಗೆ ಸ್ಪಷ್ಟ ಸಂದೇಶ ಸಾರಿದೆ.
  
ಆಧಾರ ಕಾರ್ಡ್ ಅಗತ್ಯವಿರುವ ಸೇವೆಗಳು
 
ಪಾನ್‌ಕಾರ್ಡ್‌ಗೆ ಆಧಾರ ಕಾರ್ಡ್ ಕಡ್ಡಾಯ
 
ಐಟಿಆರ್‌ ದಾಖಲಿಸಲು ಆಧಾರ ಕಾರ್ಡ್ ಕಡ್ಡಾಯ
 
ಪಿಡಿಎಸ್‌ ಸೇರಿದಂತೆ ಸರಕಾರಿ ಯೋಜನೆಗಳ ಫಲಾನುಭವಿಗಳಾಗಲು ಆಧಾರ ಕಾರ್ಡ್ ಬೇಕೇ ಬೇಕು.
 
ಇವೆಲ್ಲಾ ಸೇವೆಗಳಿಗೆ ಆಧಾರ ಕಾರ್ಡ್ ಕಡ್ಡಾಯವಲ್ಲ
 
ಸಿಬಿಎಸ್‌ಇ ಪರೀಕ್ಷೆ, ನ್ಯಾಷನಲ್‌ ಎಲಿಜಿಬಿಲಿಟಿ ಕಮ್ ಎಂಟ್ರೇನ್ಸ್ ಟೆಸ್ಟ್ ಫಾರ್ ಮೆಡಿಕಲ್ ಎಂಟ್ರೆನ್ಸ್, ಯುಜಿಸಿಗಳಿಗೆ ಆಧಾರ ಕಾರ್ಡ್ ಅಗತ್ಯವಿಲ್ಲ.
 
ಶಾಲಾ ದಾಖಲಾತಿಗೆ ಆಧಾರ ಕಾರ್ಡ್ ಬೇಕಾಗಿಲ್ಲ.
 
ಬ್ಯಾಂಕ್ ಖಾತೆ ತೆರೆಯಲು ಆಧಾರ ಕಾರ್ಡ್ ಬೇಕಾಗಿಲ್ಲ
 
ಆಧಾರ ಕಾರ್ಡ್ ವಿವರಗಳ ಬೇಕು ಎಂದು ಮೊಬೈಲ್ ಕಂಪೆನಿಗಳು ಒತ್ತಾಯಿಸುವಂತಿಲ್ಲ 
 
ಖಾಸಗಿ ಕಂಪೆನಿಗಳು ಆಧಾರ ಕಾರ್ಡ್ ವಿವರಗಳು ಪಡೆಯುವ ಅಧಿಕಾರವಿಲ್ಲ
 
ಮೊಬೈಲ್ ಫೋನ್ ಸಂಪರ್ಕಕ್ಕಾಗಿ ಆಧಾರ ಕಾರ್ಡ್ ಕಡ್ಡಾಯವಲ್ಲ
 
ಹೊಸ ಸಿಮ್ ಕಾರ್ಡ್‌ಗಳನ್ನು ಪಡೆಯಲು ಆಧಾರ ಕಾರ್ಡ್ ಅಗತ್ಯವಿಲ್ಲ
 
ಪಿಪಿಎಫ್‌, ಎನ್‌ಎಸ್‌ಸಿ ಸೇರಿದಂತೆ ಇತಹ ಹಣಕಾಸು ವ್ಯವಹಾರಗಳಿಗೆ ಆಧಾರ ಕಾರ್ಡ್ ಬೇಕಾಗಿಲ್ಲ
 
ಸುಪ್ರೀಂಕೋರ್ಟ್ ಇಂದು ಕೆಲ ಬದಲಾವಣೆಗಳೊಂದಿಗೆ ಮಹತ್ವದ ತೀರ್ಪು ನೀಡಿದ್ದು, ಅನೇಕ ಗೊಂದಲಗಳಿಗೆ ಇತಿಶ್ರೀ ಹಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಯ್ ಗೆ ಜೈಲಾ? ಬೇಲಾ? ಇಂದು ನಿರ್ಧಾರ