Select Your Language

Notifications

webdunia
webdunia
webdunia
webdunia

ನಾಳೆ ನಾಡಿದ್ದು ಬೆಂಗಳೂರಿನಲ್ಲಿ ಮಳೆಯಾಗುವ ಮುನ್ಸೂಚನೆ

Bangalore Water Crisis

Sampriya

ಬೆಂಗಳೂರು , ಬುಧವಾರ, 20 ಮಾರ್ಚ್ 2024 (14:12 IST)
ಬೆಂಗಳೂರು:ನಾಳೆಯಿಂದ ಮಾರ್ಚ್‌ 22ರ ವರೆಗೆ ಬೆಂಗಳೂರು ನಗರದಲ್ಲಿ ಮಳೆಯಾಗುವ ಮುನ್ಸೂಚನೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. 
 
ಇದರಿಂದ ಸದ್ಯ ನಗರದಲ್ಲಿ ಎದುರಾಗುತ್ತಿರುವ ನೀರಿನ ಸಮಸ್ಯೆಗೆ ಕೊಂಚ ಬ್ರೇಕ್ ಸಿಗಬಹುದು. ನಗರದಲ್ಲಿ ಸದ್ಯ ಮಳೆಯ ಕೊರತೆಯಿಂದಾಗಿ ನೀರಿನ ಬಿಕ್ಕಟ್ಟು ಎದರಾಗಿದ್ದು, ನೀರಿನ ಪೂರೈಕೆಗಾಗಿ ಕೊಳವೆ ಬಾವಿಗಳು ಮತ್ತು ಕಾವೇರಿ ಜಲಾಶಯವನ್ನು ಹೆಚ್ಚು ಅವಲಂಬಿಸಿದೆ. ತಾಪಮಾನದ ಹೆಚ್ಚಳ ಮತ್ತು ಮಳೆಯಾಗದಿರುವ ಪರಿಣಾಮ ಇದೀಗ ಹಲವಾರು ಕೊಳವೆಬಾವಿಗಳು ಬತ್ತಿದ್ದು, ನಿವಾಸಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
 
ಗಣನೀಯ ಮಳೆಯಾಗುವ ಯಾವುದೇ ಗ್ಯಾರಂಟಿ ಇಲ್ಲದಿದ್ದರೂ, ಸದ್ಯದ ನೀರಿನ ಬಿಕ್ಕಟ್ಟಿನಿಂದ ಪರಿಹಾರಕ್ಕಾಗಿ ಕಾತರದಿಂದ ಕಾಯುತ್ತಿರುವ ಬೆಂಗಳೂರಿನ ನಿವಾಸಿಗಳಿಗೆ ಈ ಮುನ್ಸೂಚನೆಯು ಭರವಸೆಯ ಕಿರಣವನ್ನು ನೀಡುತ್ತದೆ.
 
ಹವಾಮಾನ ಇಲಾಖೆ ಪ್ರಕಾರ,  ಮಾರ್ಚ್ 21 ರಿಂದ 23ರ ನಡುವೆ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಲಘು ಮಳೆಯಾಗಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆ ಚುನಾವಣೆಯಲ್ಲಿ ಅಗತ್ಯ ಸೇವೆ: 12 ಇಲಾಖೆ ಸಿಬ್ಬಂದಿಗೆ ಸಿಗಲಿದೆ ಅಂಚೆ ಮತದಾನದ ಅವಕಾಶ