Select Your Language

Notifications

webdunia
webdunia
webdunia
webdunia

ಪ್ರವಾಹಕ್ಕೆ ಸಿಲುಕಿ 1700ಕಿ.ಮೀ ಕೊಚ್ಚಿಕೊಂಡು ಹೋಗಿದ್ದ ಆನೆ ಸಾವು

ಪ್ರವಾಹಕ್ಕೆ ಸಿಲುಕಿ 1700ಕಿ.ಮೀ ಕೊಚ್ಚಿಕೊಂಡು ಹೋಗಿದ್ದ ಆನೆ ಸಾವು
ಢಾಕಾ , ಮಂಗಳವಾರ, 16 ಆಗಸ್ಟ್ 2016 (12:59 IST)
ಪ್ರವಾಹಕ್ಕೆ ಸಿಲುಕಿ ಭಾರತದಿಂದ - ಬಾಂಗ್ಲಾಕ್ಕೆ ಸುಮಾರು 1,700 ಕೀಲೋಮೀಟರ್ ಕೊಚ್ಚಿ ಹೋಗಿದ್ದ ಆನೆ ಬಂಗಬಹದ್ದೂರ್ ಹೃದಯಾಘಾತಕ್ಕೊಳಗಾಗಿ ಮಂಗಳವಾರ ಮುಂಜಾನೆ ಸಾವನ್ನಪ್ಪಿದೆ. 

ಬಾಂಗ್ಲಾದೇಶದ ಜಮಾಲ್ಪುರದ ಶರಿಶಬರಿಯ ಕೊಯ್ರಾ ಗ್ರಾಮದಲ್ಲಿ ಮುಂಜಾನೆ 6. 30 ರ ಸುಮಾರಿಗೆ ಆನೆ ಸಾವನ್ನಪ್ಪಿದೆ. 
 
ಆತನನ್ನು ಉಳಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲವಾಯಿತು ಎಂದು ಬಂಗಬಂಧು ರಾಷ್ಟ್ರೀಯ ಉದ್ಯಾನವನದ ಪಶುವೈದ್ಯ  ಮುಸ್ತಫಿಜುರ್ ರೆಹಮಾನ್  ಹೇಳಿದ್ದಾರೆ.
 
ಕಳೆದ ಜೂನ್ 27 ರಂದು ಆಸ್ಸಾಂನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಬಂಗಬಹದ್ದೂರ್ ನೀರಿನಲ್ಲಿ ಬ್ರಹ್ಮಪುತ್ರ ನೀರಿನಲ್ಲಿ ಕೊಚ್ಚಿ ಹೋಗಿತ್ತು. 
 
ಸುಮಾರು 1,700 ಕೀಲೋಮೀಟರ್ ದೂರಕ್ಕೆ ಕೊಚ್ಚಿ ಹೋಗಿ ಬಾಂಗ್ಲಾ ಸೇರಿದ್ದ ಆನೆಯನ್ನು ರಕ್ಷಿಸಿದ್ದ ಅಲ್ಲಿನ ಅರಣ್ಯ ಇಲಾಖಾ ಸಿಬ್ಬಂದಿ ರಕ್ಷಿಸಿದ್ದರು. ಆದರೆ ಅಷ್ಟೊಂದು ಪ್ರಯಾಣವನ್ನು ಮಾಡಿ ಬಳಲಿದ್ದ ಆನೆ ನಿತ್ರಾಣವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಧ್ವಜಾರೋಹಣ ಮಾಡಿ ಭದ್ರತಾ ಅಧಿಕಾರಿಯಿಂದ ಶೂ ಕಟ್ಟಿಕೊಂಡ ಸಚಿವ