Select Your Language

Notifications

webdunia
webdunia
webdunia
webdunia

ಮಾಲಿಕನಂತೆ ಮೆರೆದ ಡೇರಾ ಬಾಬನಿಗೆ ಈಗ ಮಾಲಿ ಕೆಲಸ!

ಮಾಲಿಕನಂತೆ ಮೆರೆದ ಡೇರಾ ಬಾಬನಿಗೆ ಈಗ ಮಾಲಿ ಕೆಲಸ!
ನವದೆಹಲಿ , ಮಂಗಳವಾರ, 29 ಆಗಸ್ಟ್ 2017 (11:16 IST)
ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ಜೈಲಿನಲ್ಲಿ ಈಗ ಮಾಲಿ!

 
ಹೌದು. ಮಾಲಿಕನಂತೆ ಮೆರೆದಿದ್ದ ಬಾಬಾ ಈಗ ಮಾಲಿಯಂತೆ ಬದುಕಬೇಕಿದೆ. ಡೇರಾ ಮುಖ್ಯಸ್ಥ ಮೊದಲ ದಿನ ನಿದ್ದೆಯಿಲ್ಲದೇ ಕಳೆದಿದ್ದ.

ಇದಾದ ಮೇಲೆ ಜೈಲಿನ ಔಪಚಾರಿಕ ಫಾರಂನಲ್ಲಿ ಭರ್ತಿ ಮಾಡುವಾಗ ಫ್ಯಾಕ್ಟರಿ ಕೆಲಸ ಅಥವಾ ಮಾಲಿ ಕೆಲಸ ಮಾಡುವುದಾಗಿ ಹೇಳಿದ್ದಾನಂತೆ. ಇದೀಗ ಆತನಿಗೆ ಮಾಲಿ ಕೆಲಸ ಪಕ್ಕಾ ಆಗುವ ಸಾಧ್ಯತೆಯಿದೆ.

ಇನ್ನೊಂದೆಡೆ ಡೇರಾ ಬಾಬಾ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶ ಜಗದೀಪ್ ಸಿಂಗ್ ಗೆ ಝೆಡ್ ಪ್ಲಸ್ ಭದ್ರತೆ ನೀಡಲಾಗಿದೆ. ಹೈ ಪ್ರೊಫೈಲ್ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರಿಗೆ ಸಹಜವಾಗಿಯೇ ಬೆದರಿಕೆ ಇರುತ್ತದೆ. ಹೀಗಾಗಿ ಗರಿಷ್ಠ ಭದ್ರತೆ ಒದಗಿಸಲಾಗಿದೆ.

ಇದನ್ನೂ ಓದಿ.. ಡೇರಾ ಬಾಬಾ ಆಯ್ತು.. ಇನ್ನೊಬ್ಬ ಬಾಬಾನಿಗೂ ಇಂದೇ ಅಗ್ನಿಪರೀಕ್ಷೆ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಡೇರಾ ಬಾಬಾ ಆಯ್ತು.. ಇನ್ನೊಬ್ಬ ಬಾಬಾನಿಗೂ ಇಂದೇ ಅಗ್ನಿಪರೀಕ್ಷೆ