Select Your Language

Notifications

webdunia
webdunia
webdunia
webdunia

ರತನ್ ಟಾಟಾಗೂ ಡೀಪ್ ಫೇಕ್ ಸಂಕಷ್ಟ!

ರತನ್ ಟಾಟಾಗೂ ಡೀಪ್ ಫೇಕ್ ಸಂಕಷ್ಟ!
ನವದೆಹಲಿ , ಗುರುವಾರ, 7 ಡಿಸೆಂಬರ್ 2023 (15:50 IST)
ನವದೆಹಲಿ: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಸಿನಿ ತಾರೆಯರ ಡೀಪ್ ಫೇಕ್ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು.

ತಾರೆಯರ ಎಡಿಟ್ ಮಾಡಲಾದ ನಕಲಿ ಹಾಟ್ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರುವ ದಂಧೆಯೇ ಶುರುವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರವೂ ಕಠಿಣ ಕ್ರಮಕ್ಕೆ ಮುಂದಾಗಿದೆ.

ಇದೀಗ ಡೀಪ್ ಫೇಕ್ ವಿಡಿಯೋ ಸಂಕಷ್ಟ ಥಳುಕು ಬಳುಕಿನ ಗಂಧವಿಲ್ಲದ, ಸರಳ, ಸಜ್ಜನ ಉದ್ಯಮಿ ರತನ್ ಟಾಟಾಗೂ ತಟ್ಟಿದೆ! ದೇಶದ ಗೌರವಾನ್ವಿತ ಉದ್ಯಮಿ, ಟಾಟಾ ಸಂಸ್ಥೆಯ ಮಾಜಿ ಅಧ‍್ಯಕ್ಷ ರತನ್ ಟಾಟಾರ ನಕಲಿ ಸಂದರ್ಶನದ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಲಾಗಿದೆ.

ಇದು ವೈರಲ್ ಆಗುತ್ತಿದ್ದಂತೇ ಪ್ರತಿಕ್ರಿಯಿಸಿರುವ ರತನ್ ಟಾಟಾ ಇದು ನಕಲಿಯಾಗಿದ್ದು, ಈ ವಿಡಿಯೋದಲ್ಲಿರುವ ವ್ಯಕ್ತಿ ತಾನಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇನ್ಮೇಲೆ ಕಾವೇರಿ ನೀರಿನ ಆತಂಕ ನಗರದಲ್ಲಿ ಇರಲ್ಲ