Select Your Language

Notifications

webdunia
webdunia
webdunia
webdunia

ಮದ್ಯ ಕುಡಿಸಿ 2 ವರ್ಷಗಳಿಂದ ತಾಯಿ, ಮೂವರು ಪುತ್ರಿಯರ ಮೇಲೆ ಅತ್ಯಾಚಾರ

ಮದ್ಯ ಕುಡಿಸಿ 2 ವರ್ಷಗಳಿಂದ ತಾಯಿ, ಮೂವರು ಪುತ್ರಿಯರ ಮೇಲೆ ಅತ್ಯಾಚಾರ
ಪಾಲಕ್ಕಾಡ್(ಕೇರಳ) , ಬುಧವಾರ, 25 ಅಕ್ಟೋಬರ್ 2017 (13:29 IST)
ಆಘಾತಕಾರಿ ಘಟನೆಯೊಂದರಲ್ಲಿ ದಲಿತ ಮಹಿಳೆ ಮತ್ತು ಆಕೆಯ ಮೂವರು ಪುತ್ರಿಯರಿಗೆ ಒತ್ತಾಯದಿಂದ ಮದ್ಯ ಕುಡಿಸಿ ಎರಡು ವರ್ಷಗಳ ಕಾಲ ಅತ್ಯಾಚಾರವೆಸಗಿದ ಘಟನೆ ವರದಿಯಾಗಿದೆ.
ದಲಿತ ಕುಟುಂಬದ ಬಡತನವನ್ನು ಉಪಯೋಗಿಸಿಕೊಂಡ ಆರೋಪಿ, ನಿರಂತರವಾಗಿ ತಾಯಿ ಮತ್ತು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
 
ದೂರಿನ ಪ್ರಕಾರ, ಕೇರಳದ ಕಂಜಿಕ್ಕೋಡ್‌ನ ಸತ್ರಪ್ಪಡಿ ಪಟ್ಟಣದಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಆರೋಪಿ ಪ್ರಸಾದ್ ಎಂಬಾತ ಎರಡು ವರ್ಷಗಳಿಂದ ತಾಯಿ ಮತ್ತು ಮೂವರು ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಒಂದು ವೇಳೆ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ. 
 
ಪುದುಸರಿ ಪಂಚಾಯತ್ ಸದಸ್ಯ ಬಾಲಮುರಳಿ, ಸಾಮಾಜಿಕ ನ್ಯಾಯ ಇಲಾಖೆಯೊಂದಿಗೆ ಆರೋಪಿಯ ವಿರುದ್ಧ ದೂರು ದಾಖಲಿಸಿದರು. ತಾಯಿ ಮತ್ತು ಮೂವರು ಪುತ್ರಿಯರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. 
 
ಆರೋಪಿ ಪ್ರಸಾದ್ ವಿರುದ್ಧ ದೂರು ದಾಖಲಿಸುವ ಮುನ್ನವೇ ಇಬ್ಬರು ಬಾಲಕಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ