Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಎದುರೇ ಬಯಲಾಯಿತು ಕಾಂಗ್ರೆಸ್ ನ ಈ ಟಾಪ್ ನಾಯಕರ ಕಿತ್ತಾಟ

ರಾಹುಲ್ ಗಾಂಧಿ ಎದುರೇ ಬಯಲಾಯಿತು ಕಾಂಗ್ರೆಸ್ ನ ಈ ಟಾಪ್ ನಾಯಕರ ಕಿತ್ತಾಟ
ನವದೆಹಲಿ , ಶುಕ್ರವಾರ, 2 ನವೆಂಬರ್ 2018 (08:57 IST)
ನವದೆಹಲಿ: ಮಧ್ಯಪ್ರದೇಶ ಚುನಾವಣೆಗಾಗಿ ರಾಹುಲ್ ಗಾಂಧಿ ನೇಮಿಸಿದ್ದ ಎರಡು ಸಮಿತಿಯ ನಾಯಕರ ನಡುವಿನ ಕಿತ್ತಾಟ ಅವರ ಎದುರೇ ಬಹಿರಂಗಗೊಂಡಿದೆ.

ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಗಳ ಅಂತಿಮ ಲಿಸ್ಟ್ ಮಾಡಲು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತು ಜ್ಯೋತಿರಾಧಿತ್ಯ ಸಿಂಗ್ ವಾಕ್ಸಮರ ನಡೆಯಿತು.

ತಮ್ಮ ಎದುರೇ ಹೀಗೆ ಇಬ್ಬರೂ ನಾಯಕರು ಕಿತ್ತಾಡುವುದನ್ನು ನೋಡಿ ರಾಹುಲ್ ಗಾಂಧಿ ಅಕ್ಷರಶಃ ಸಿಟ್ಟಿಗೆದ್ದಿದ್ದಾರೆ ಎನ್ನಲಾಗಿದೆ. ಇದೀಗ ಈ ಇಬ್ಬರೂ ನಾಯಕರ ಜತೆ ಮಾತುಕತೆ ನಡೆಸಿ ಚುನಾವಣೆ ಬಗ್ಗೆ ಗಮನಹರಿಸಲು ಇನ್ನೊಂದು ಸಮನ್ವಯ ಸಮಿತಿ ರಚಿಸಲಾಗಿದೆ. ಹಾಗಿದ್ದರೂ ಇವರಿಬ್ಬರ ಕಿತ್ತಾಟದ ಬಗ್ಗೆ ಕಾಂಗ್ರೆಸ್ ನಾಯಕರು ಬಹಿರಂಗ ಹೇಳಿಕೆ ನೀಡದಂತೆ ಹೈಕಮಾಂಡ್ ಹುಕುಂ ಹೊರಡಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಕ್ರೀಡಾಳುಗಳಿಗೆ ಸ್ಪೋರ್ಟ್ಸ್ ಕಿಟ್ ಎಸೆದು ಅವಮಾನ ಮಾಡಿದ ಸಚಿವ ಆರ್ ವಿ ದೇಶಪಾಂಡೆ ವಿರುದ್ಧ ಆಕ್ರೋಶ