Select Your Language

Notifications

webdunia
webdunia
webdunia
webdunia

ಡಿಆರ್ ಡಿಒದಿಂದ ಸೈನಿಕರಿಗಾಗಿ ಚಿಕನ್ ಬಿಸ್ಕೆಟ್, ಮಟನ್ ಬಾಲ್

ಡಿಆರ್ ಡಿಒದಿಂದ ಸೈನಿಕರಿಗಾಗಿ ಚಿಕನ್ ಬಿಸ್ಕೆಟ್, ಮಟನ್ ಬಾಲ್
ನವದೆಹಲಿ , ಶನಿವಾರ, 22 ಜುಲೈ 2017 (09:16 IST)
ನವದೆಹಲಿ: ದೇಶದ ಗಡಿ ಭಾಗದಲ್ಲಿ ಹಗಲಿರುಳೆನ್ನದೆ, ಸುಡು ಬಿಸಿಲು-ಮೈಕೊರೆವ ಚಳಿಯನ್ನೂ ಗಮನಿಸದೇ ಕಾಯುವ ಸೈನಿಕರಿಗಾಗಿ ರಕ್ಷಣೆ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್ ಡಿಒ) ಪ್ರೋಟಿನ್ ಸಮೃದ್ಧ ಆಹಾರಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.
 
ಡಿಆರ್ ಡಿಒ ಅಭಿವೃದ್ಧಿ ಪಡಿಸುವ ಆಹಾರ ಪದಾರ್ಥಗಳಲ್ಲಿ ಚಿಕನ್ ಬಿಸ್ಕೆಟ್ ಗಳು, ಪ್ರೋಟೀನ್ ಸಮೃದ್ಧ ಮಟನ್ ಬಾಲ್ ಗಳು, ಮಿಶ್ರ ಧಾನ್ಯಗಳ ತುಂಡುಗಳು, ಮೊಟ್ಟೆ ಪ್ರೋಟೀನ್ ಬಿಸ್ಕೆಟ್ ಗಳು, ಕಬ್ಬಿಣಾಂಶ ಮತ್ತು ಪ್ರೋಟೀನ್ ಯುಕ್ತ ಬಾರ್ ಗಳು, ಚಿಕನ್ ಕಟ್ಟಿ ರೋಲ್ ಗಳು, ಆಯಾಸ ನಿವಾರಿಸುವ ತುಳಸಿ ಬಾರ್ ಗಳು ಇರಲಿವೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಸಂಸತ್ ಗೆ ಮಾಹಿತಿ ನೀಡಿದ್ದಾರೆ.
 
ಡಿಆರ್ ಡಿಒದಲ್ಲಿ ಯಾವುದೇ ಆಹಾರ ಉತ್ಪನ್ನ ಘಟಕಗಳಿಲ್ಲ. ಇದೀಗ ವಿಶೇಷ ಆಹಾರ ತಯಾರಿಸುವುದರಿಂದ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಮಾಡಲು ಹಲವಾರು ಉದ್ಯಮಗಳಿಗೆ ವಹಿಸಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತೀಯರನ್ನು ಅವಹೇಳನ ಮಾಡಿದ್ದು ‘ಸಂವಹನ ದೋಷದಿಂದ ಎಂದ ಒಪ್ಪೊ ಸಂಸ್ಥೆ