Select Your Language

Notifications

webdunia
webdunia
webdunia
webdunia

ಉಗ್ರ ಹಫೀಜ್ ಸಯೀದ್ ಇಸ್ಲಾಂ ವಿರೋಧಿ: ಫತ್ವಾ ಹೊರಡಿಸಿದ ಇಸ್ಲಾಮಿಕ್ ಸೆಮಿನರಿ

ಉಗ್ರ ಹಫೀಜ್ ಸಯೀದ್ ಇಸ್ಲಾಂ ವಿರೋಧಿ: ಫತ್ವಾ ಹೊರಡಿಸಿದ ಇಸ್ಲಾಮಿಕ್ ಸೆಮಿನರಿ
ಲಕ್ನೋ , ಗುರುವಾರ, 18 ಆಗಸ್ಟ್ 2016 (19:48 IST)
ಪಾಕಿಸ್ತಾನದ ಜಮಾತ್ ಉದ್ ದಾವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಇಸ್ಲಾಂ ವಿರೋಧಿ ಎಂದು ಇಸ್ಲಾಮಿಕ್ ಸೆಮಿನರಿ ಫತ್ವಾ ಹೊರಡಿಸಿದೆ. 
 
ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಇಸ್ಲಾಂ ಧರ್ಮದ ವಿರೋಧಿ ಎಂದು ಉತ್ತರಪ್ರದೇಶದ ಬರೇಲಿಯ ಇಸ್ಲಾಮಿಕ್ ಸೆಮಿನರಿ ಮುಖ್ಯಸ್ಥ ಮುಫ್ತಿ ಮೊಹಮ್ಮದ್ ಸಲೀಮ್ ಫತ್ವಾ ಘೋಷಿಸಿದ್ದಾರೆ. 
 
 ಜಾಗತಿಕ ಉಗ್ರಗಾಮಿ ಸಂಘಟನೆಯಾದ ಲಷ್ಕರ್-ಎ-ತೊಯಿಬಾ ಮುಖ್ಯಸ್ಥ ಹಫೀಜ್ ಸಯೀದ್‌ ವಿರುದ್ಧ ಫತ್ವಾ ಹೊರಡಿಸಲಾಗಿದ್ದು ಆತನನ್ನು ಬೆಂಬಲಿಸುವವರು ಕೂಡಾ ಇಸ್ಲಾಂ ವಿರೋಧಿಗಳು ಎಂದು ಘೋಷಿಸಿದ್ದಾರೆ. 
 
ಉಗ್ರ ಹಫೀಜ್ ಸಯೀದ್, ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್‌ಗೆ ಕಾಶ್ಮಿರಕ್ಕೆ ಸೇನೆಯನ್ನು ಕಳುಹಿಸುವಂತೆ ಒತ್ತಡ ಹೇರಿದ ವರದಿಗಳು ಬಹಿರಂಗವಾಗುತ್ತಿದ್ದಂತೆ ಇಸ್ಲಾಮಿಕ್ ಸೆಮಿನರಿ ಸಯೀದ್ ವಿರುದ್ಧ ಫತ್ವಾ ಹೊರಡಿಸಿದೆ. 
 
ದರ್ಗಾ ಅಲಾ ಹಜರತ್‌ನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಂಜರ್-ಎ-ಇಸ್ಲಾಂ ಸೌದಾಗರನ್ ಸಂಸ್ಥೆ ಫತ್ವಾ ಹೊರಡಿಸಿದ್ದು, ಹಫೀಜ್ ಸಯೀದ್‌ಗೆ ಇಸ್ಲಾಂನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಜೈಪುರದ ಮೊಹಮ್ಮದ್ ಮೊಯಿನೂದ್ದೀನ್ ಘೋಷಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅಗಸ್ಟ್ 24 ರಂದು ನೂತನ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ ಬಿಡುಗಡೆ!