Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್, ಐವರು ಬಾಲಕರಿಂದ ಯುವತಿಯ ಮೇಲೆ ಅಟ್ಟಹಾಸ

ದೆಹಲಿಯಲ್ಲಿ ಮತ್ತೊಂದು ಗ್ಯಾಂಗ್ ರೇಪ್, ಐವರು ಬಾಲಕರಿಂದ ಯುವತಿಯ ಮೇಲೆ ಅಟ್ಟಹಾಸ
ನವದೆಹಲಿ , ಶುಕ್ರವಾರ, 22 ಡಿಸೆಂಬರ್ 2017 (14:12 IST)
20 ವರ್ಷದ ಯುವತಿ ಮೇಲೆ ಐವರು ಬಾಲಕರು ಗ್ಯಾಂಗ್ ರೇಪ್ ಮಾಡಿರುವ ಘಟನೆ ಜಹಂಗಿರ್ ಪುರಿಯಲ್ಲಿ ನಡೆದಿದ್ದು, ದೆಹಲಿಯಲ್ಲಿ ಗ್ಯಾಂಗ್ ರೇಪ್ ಮರುಕಳಿಸಿದೆ.
 
ಜಹಂಗೀರ್‍ ಪುರಿಯಲ್ಲಿನ ನಗರಸಭೆ ಕಸ ಸುರಿಯುವ ಪ್ರದೇಶದ ಹತ್ತಿರ ಘಟನೆ ನಡೆದಿದೆ. ‌ಶಾಲೆಯನ್ನು ಅರ್ಧಕ್ಕೆ ತ್ಯಜಿಸಿರುವ ಬಾಲಕರು ಯುವತಿಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದರು. ಬುಧವಾರ ರಾತ್ರಿ 10 ಗಂಟೆಯಲ್ಲಿ ಯುವತಿ ಮನೆಯಿಂದ ಹೊರಗೆ ಬಂದಾಗ ಐವರು ಬಾಲಕರು ಆಕೆಯನ್ನು ಹತ್ತಿರದ ನಿರ್ಜನ ಪ್ರದೇಶಕ್ಕೆ ಎಳೆದೊಯ್ಡು ಅತ್ಯಾಚಾರ ನಡೆಸಿದ್ದಾರೆ. 
 
ಶಾಲೆಯನ್ನು ಅರ್ಧಕ್ಕೆ ತ್ಯಜಿಸಿರುವ ಈ ಬಾಲಕರು ಕಸ ಸುರಿಯುವ ಸ್ಥಳದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಹತ್ತಿರದ ಕಾಲೋನಿ ಬಳಿ ವಾಸವಾಗಿರುವ ಇವರಿಗೆ ಯುವತಿಯೊಂದಿಗೆ ಪರಿಚಯ ಬೆಳೆಸಿಕೊಂಡಿದ್ದರು. ಸಂತ್ರಸ್ತೆ ನೀಡಿದ ದೂರನ್ನು ಆಧರಿಸಿ ಪೊಲೀಸರು ಐವರು ಬಾಲಕರನ್ನು ಬಂಧಿಸಿದ್ದಾರೆ. 

ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಕಿರುಚಾಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ನಂತರ ಈ ವಿಷಯವನ್ನು ಯಾರಿಗೂ ತಿಳಿಸಿದಂತೆ ಎಚ್ಚರಿಕೆ ನೀಡಿದ್ದರು. 
 
ಆರೋಪಿ ಬಾಲಕರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಯುವತಿಯ ಗೆಳೆಯನನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಯೋಗಿ ಆದಿತ್ಯನಾಥ್ ಕಾನೂನು ಪಾಠ ಹೇಳುವ ಅಗತ್ಯವಿಲ್ಲ– ಸಿಎಂ