Select Your Language

Notifications

webdunia
webdunia
webdunia
webdunia

ನಟಿ ಮದುವೆ ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಆಕೆಯ ಬಾಯ್ ಫ್ರೆಂಡ್

ನಟಿ ಮದುವೆ ನಿರಾಕರಿಸಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಆಕೆಯ ಬಾಯ್ ಫ್ರೆಂಡ್
ಚೆನ್ನೈ , ಮಂಗಳವಾರ, 18 ಸೆಪ್ಟಂಬರ್ 2018 (07:19 IST)
ಚೆನ್ನೈ :ತಮಿಳು ಕಿರುತೆರೆ ನಟಿ ನಿಳನಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಆಕೆಯ ಬಾಯ್ ಫ್ರೆಂಡ್ ಮನನೊಂದು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚೆನ್ನೈನಲ್ಲಿ ನಡೆದಿದೆ.


ನಟಿ ನಿಳನಿ ಲಲಿತ್ ಕುಮಾರ್ ಎಂಬುವವರ ಜೊತೆ ಲಿವಿಂಗ್ ಟು ಗೆದರ್​ನಲ್ಲಿದ್ದು, ಇತ್ತೀಚೆಗೆ ಆತ ತನನ್ನು ಮದುವೆಯಾಗುವಂತೆ ನಟಿಯ ಬಳಿ ಕೇಳಿಕೊಂಡಿದ್ದಾನೆ. ಆದರೆ ಇದಕ್ಕೆ ನಟಿ ನಿರಾಕರಿಸಿದ್ದಾಳೆ.


ನಂತರ ನಿಳನಿ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಮತ್ತೆ ಲಲಿತ್​ ಕುಮಾರ್ ಈ ವಿಚಾರವಾಗಿ ಆಕೆಯ ಜೊತೆ ಜಗಳವಾಡಿದ್ದಾನೆ. ಆಗ ನಟಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.


ಇದರಿಂದ ಮನನೊಂದು ಲಲಿತ್​ ಕುಮಾರ್​ ಕೆಕೆ ನಗರ್ ಪೊಲೀಸ್ ಸ್ಟೇಶನ್ ಎದುರೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಹಪಾಠಿ ಬಾಲಕರ ಜನನಾಂಗಗಳಿಗೆ ನೂಲು ಸುತ್ತಿ ಕಿರುಕುಳ ನೀಡಿದ ಬಾಲಕರು