Select Your Language

Notifications

webdunia
webdunia
webdunia
webdunia

7 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲು ಯತ್ನಿಸಿದ ಕಾಮುಕ

7 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲು ಯತ್ನಿಸಿದ ಕಾಮುಕ
ನವದೆಹಲಿ , ಶುಕ್ರವಾರ, 1 ಫೆಬ್ರವರಿ 2019 (05:58 IST)
ನವದೆಹಲಿ : ವ್ಯಕ್ತಿಯೊಬ್ಬ ಏಳು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಪೂರ್ವ ದೆಹಲಿಯ ಮಧು ವಿಹಾರ್ ನಲ್ಲಿ ನಡೆದಿದೆ.

ಮನೀಷ್(30) ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ಈತ ಅಂಗಡಿಗೆ ಹೋಗುತ್ತಿದ್ದ ಬಾಲಕಿಯೊಬ್ಬಳಿಗೆ ನಿನಗೆ ಏನನ್ನೋ ತೋರಿಸುತ್ತೀನಿ ಬಾ ಎಂದು ಸುಳ್ಳು ಹೇಳಿ ಆಕೆಯನ್ನು ಎತ್ತಿಕೊಂಡು ಮಧು ವಿಹಾರ್ ನಲ್ಲಿರುವ ಮನೆಯ ಟೆರೇಸ್ ಮೇಲೆ ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ ಕಿರುಚುತ್ತಿದ್ದ ಬಾಲಕಿಯ ಬಾಯಿ ಮುಚ್ಚಿ ಕೊಲೆ ಮಾಡಲು ಯತ್ನಿಸಿದ್ದಾನೆ.

 

ಆಗ ಹೇಗೋ ಆತನಿಂದ ತಪ್ಪಿಸಿಕೊಂಡ ಬಾಲಕಿ ನೆರೆಹೊರೆಯವರನ್ನು ಕರೆದಿದ್ದಾಳೆ. ಆ ವೇಳೆ ಸ್ಥಳೀಯರೆಲ್ಲಾ ಸೇರಿದಾಗ ಭಯಭೀತನಾದ ಆರೋಪಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ತಕ್ಷಣ ಆತನನ್ನು ಹಿಡಿದ ಸ್ಥಳೀಯರು ಚೆನ್ನಾಗಿ  ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯರೇ ಹುಷಾರ್! ನಿಮ್ಮ ಟಿಕ್ ಟಾಕ್ ವಿಡಿಯೋವನ್ನು ಅಶ್ಲೀಲವಾಗಿ ಬಳಸಿಕೊಳ್ಳುವವರಿದ್ದಾರೆ ಎಚ್ಚರ