Select Your Language

Notifications

webdunia
webdunia
webdunia
webdunia

ಒಂದು ವರ್ಷ ಲೊಕೇಷನ್ ಲೀಸ್ ತೆಗೆದುಕೊಂಡರು ರಾಜಮೌಳಿ.. ಎಲ್ಲಿ ಅಂದ್ರೆ !

ಒಂದು ವರ್ಷ ಲೊಕೇಷನ್ ಲೀಸ್ ತೆಗೆದುಕೊಂಡರು ರಾಜಮೌಳಿ.. ಎಲ್ಲಿ ಅಂದ್ರೆ !
, ಶುಕ್ರವಾರ, 17 ಜನವರಿ 2014 (11:40 IST)
PR
ಇಷ್ಟು ದಿನಗಳ ಕಾಲ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಇದ್ದ ತೆಲುಗು ಸಿನಿಮಂದಿ ಈಗ ಮತ್ತೆ ತಮ್ಮತಮ್ಮ ಕೆಲಸಗಳಿಗೆ ಹಿಂತಿರುಗಿದ್ದಾರೆ. ಅವರಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ ಟೀಮ್ ಸಹ ಕೆಲ್ಸಕ್ಕೆ ಹಿಂತಿರುಗಿದೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಅನುಷ್ಕ. ಈಗ ಆ ಸಿನಿಮಾದ ಬಗ್ಗೆ ಒಂದು ವಿಶೇಷ ಸಂಗತಿ ಹೇಳಲು ಹೊರಟಿದ್ದೇವೆ. ಬಾಹುಬಲಿ ಚಿತ್ರವೂ ಬಿಡುಗಡೆ ಭಾಗ್ಯ ಕಾಣುವುದು ಇನ್ನು ಎರಡು ವರ್ಷದ ಬಳಿಕ. ಆದರೆ ಆ ಚಿತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಂಗತಿಗಳು ಹೊರ ಬೀಳುತ್ತಲೇ ಇರುತ್ತವೆ ದಿನಕ್ಕೊಂದರಂತೆ.

ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸುಮಾರು ಒಂದು ವರ್ಷಗಳ ಕಾಲ ಒಂದು ಲೋಕೇಶನ್ ಲೀಜ್ ಗೆ ತೆಗೆದುಕೊಂಡಿದ್ದಾರಂತೆ ಸ್ಟಾರ್ ನಿರ್ದೇಶಕ ರಾಜಮೌಳಿ . ಅದು ಬೇರೆ ಎಲ್ಲೂ ಅಲ್ಲ ರಾಮೋಜಿ ಫಿಲ್ಮ್ ಸಿಟಿಯಲ್ಲಿ . ಈಗಾಗಲೇ ರಾಮೋಜಿ ಫಿಲಿಂ ಸಿಟಿಯಲ್ಲಿ ಅವರು ಯುದ್ಧ ಸನ್ನಿವೇಶಗಳನ್ನು ಚಿತ್ರೀಕರಿಸಿದ್ದಾರಂತೆ. ಆದರೆ ಈಗ ತೆಗೆದುಕೊಂಡಿರುವ ಈ ಲೋಕೇಶನ್ ಒಂದು ವರ್ಷ ಬೇರೆ ಯಾರಿಗೂ ನೀಡುವ ಹಾಗಿಲ್ಲ.

ಮುಖ್ಯವಾಗಿ ಈ ಚಿತ್ರದ ಲೀಜ್ ನಿಂದ ರಾಜ ಮೌಳಿ ಇದರ ಎರಡನೇ ಭಾಗವನ್ನು ಸಹ ಇಲ್ಲೇ ಶೂಟಿಂಗ್ ಮಾಡುತ್ತಾರೆ ಎನ್ನುವುದು ಸಾಬೀತಾಯಿತು. ಒಟ್ಟಾರೆ ಏನಾದರೊಂದು ಹೊಸದಾದ ಸಂಚಲನ ಮಾಡುವುದರಲ್ಲಿ ರಾಜಮೌಳಿ ಬಿಟ್ಟರೆ ಬೇರೆ ಯಾರು ಇಲ್ಲ ಎನ್ನುವುದನ್ನು ಮತ್ತೆ ಮತ್ತೆ ಸಾಬೀತು ಮಾಡಿದ್ದಾರೆ.

Share this Story:

Follow Webdunia kannada