Select Your Language

Notifications

webdunia
webdunia
webdunia
webdunia

ಜೋಗ ಜಲಪಾತ

ಜೋಗ ಜಲಪಾತ
ಚೆನ್ನೈ , ಶನಿವಾರ, 22 ನವೆಂಬರ್ 2014 (14:14 IST)
ಕರ್ನಾಟಕ ಶಿಲ್ಪಗಳ ನಾಡು, ಪ್ರಕೃತಿ ಸೌಂದರ್ಯದ ಚೆಲುವಿನ ಬೀಡು. ಅದಕ್ಕೆ ಪೂರಕ ಎಂಬಂತೆ ರಾಜ್ಯದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಜಲಪಾತಗಳು ಯಾರಿಗೆ ತಾನೆ ಇಷ್ಟ ಅಲ್ಲ. ಮಳೆಗಾಲದಲ್ಲಂತೂ ಧುಮ್ಮಿಕ್ಕಿ ಹರಿಯುವ ಜಲಧಾರೆಯನ್ನು ನೋಡುವ ಸೊಬಗೆ ಬೇರೆ. ಅದರಲ್ಲೂ ಜೋಗ ಜಲಪಾತದ ಬೋರ್ಗರೆತ ಎಂತವರನ್ನೂ ಮೋಡಿ ಮಾಡುತ್ತೆ. ಮಳೆಗಾಲದಲ್ಲಿ ರಾಜ್ಯದ ಎಲ್ಲ ಜಲಪಾತಗಳೂ ಮೈ ತುಂಬಿ ಹರಿಯುವ ಸೊಬಗನ್ನು ನೋಡಿಯೇ ಅನುಭವಿಸಬೇಕು. ಆದರೆ ಮಳೆಗಾಲ ಜಲಪಾತ ವೀಕ್ಷಣೆಗೆ ಸೂಕ್ತವಲ್ಲ. ಜೋಗ ಜಲಪಾತವನ್ನು ಹತ್ತಿರದಿಂದ ನೋಡಲು ಸಾಧ್ಯವಿಲ್ಲ. 
 
ಜಗತ್ತಿನ ಪ್ರಸಿದ್ಧ ಜಲಪಾತಗಳಲ್ಲಿ ಒಂದಾಗಿರುವ ಸುಮಾರು 810ಅಡಿ (253ಮೀಟರ್) ಎತ್ತರದಿಂದ ಜೋಗ ಜಲಪಾತ ರಾಜಾ, ರಾಣಿ, ರೋವರ್ ಹಾಗೂ ರಾಕೆಟ್ ನಾಲ್ಕು ಭಾಗವಾಗಿ ಧುಮ್ಮಿಕ್ಕುವ  ಸೊಬಗು ಅದ್ಭುತವಾದದ್ದು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ದಟ್ಟ ಕಾಡು ಹಾಗೂ ಗುಡ್ಡಗಳಿಂದ ಸುತ್ತುವರಿಯಲ್ಪಟ್ಟ ಜೋಗ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಿದೆ.
 
ಜೋಗಕ್ಕೆ ತಲುಪಲು ಮಾರ್ಗ
ಸಾಗರದಿಂದ 45ಕಿ.ಮಿ.
ಹೊನ್ನಾವರದಿಂದ-50ಕಿ.ಮಿ.
ಶಿವಮೊಗ್ಗ-105ಕಿ.ಮಿ.
ಬೆಂಗಳೂರು-378
ಮಂಗಳೂರಿನಿಂದ-180ಕಿ.ಮಿ.

Share this Story:

Follow Webdunia kannada