Select Your Language

Notifications

webdunia
webdunia
webdunia
webdunia

ಯುವತಿಯರ ಅಶ್ಲೀಲ ವಿಡಿಯೋ: ಪತಿಯ ಕರ್ಮಕಾಂಡ ಬಿಚ್ಚಿಟ್ಟ ಪತ್ನಿ

ಯುವತಿಯರ ಅಶ್ಲೀಲ ವಿಡಿಯೋ: ಪತಿಯ ಕರ್ಮಕಾಂಡ ಬಿಚ್ಚಿಟ್ಟ ಪತ್ನಿ
ದೆಹಲಿ , ಬುಧವಾರ, 15 ನವೆಂಬರ್ 2023 (18:00 IST)
ಪತಿ ವಿವಾಹಕ್ಕಿಂತ ಮುಂಚೆ ಕೂಡಾ ಯುವತಿಯರ ಅಶ್ಲೀಲ ಚಿತ್ರಗಳನ್ನು ತೆಗೆದು ಬ್ಲ್ಯಾಕ್‌ಮೇಲ್ ಮಾಡಿ ಜೈಲಿಗೂ ಹೋಗಿ ಬಂದಿದ್ದಾನೆ. ಇದೀಗ ವಿವಾಹದ ನಂತರವೂ ತನ್ನ ಹಳೇ ಚಾಳಿ ಮುಂದುವರಿಸಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.
 
ನಗರದ ನಿವಾಸಿಯಾಗಿರುವ ಪತಿ ಯುವತಿಯರ ಅಶ್ಲೀಲ ವಿಡಿಯೋ ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ ಎಂದು ನೊಂದ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
 
ದೆಹಲಿಯಲ್ಲಿ ಮತ್ತೊಬ್ಬ ಯುವತಿಯನ್ನು ಕೂಡಾ ರಿಜಿಸ್ಟರ್ ವಿವಾಹ ಮಾಡಿಕೊಂಡಿದ್ದಾನೆ. ಹಲವಾರು ಯುವತಿಯರಿಗೆ ಬ್ಲ್ಯಾಕ್ ‌ಮೇಲ್ ಮಾಡಿದ್ದಾನೆ. ಆರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಗರಾಜನ್ ಅವರಿಗೆ  ದೂರು ನೀಡಿದ್ದಾಳೆ.
 
ಮಹಿಳೆ ದೂರು ನೀಡಿದ್ದರಿಂದ ಆಕೆಯ ಪತಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಸದ ಬಿಲ್ ಗೆ ಬಿಬಿಎಂಪಿ ಯಿಂದ ಹೊಸ ರೂಲ್ಸ್!