Select Your Language

Notifications

webdunia
webdunia
webdunia
webdunia

ಯಡ್ಡಿ, ರೆಡ್ಡಿಯದ್ದು ಅಲಿಬಾಬಾ ಮತ್ತು 40 ಕಳ್ಳರ ಕಥೆ: ಸಿಎಂ

ಯಡ್ಡಿ, ರೆಡ್ಡಿಯದ್ದು ಅಲಿಬಾಬಾ ಮತ್ತು 40 ಕಳ್ಳರ ಕಥೆ: ಸಿಎಂ
ದಾವಣಗೆರ , ಶುಕ್ರವಾರ, 4 ಮೇ 2018 (16:59 IST)
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರನಲ್ಲಿ ಕಾಂಗ್ರೆಸ್  ಪ್ರಚಾರ ಸಭೆ ಆರಂಭವಾಗಿದ್ದು ಚನ್ನಗಿರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಡ್ನಾಳ್ ರಾಜಣ್ಣ ಪರ‌ ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ. 
ಬಿಜೆಪಿಯಲ್ಲಿ ಲೂಟಿಕೋರರಿಗೆ ಟಿಕೆಟ್ ಕೊಡಲಾಗಿದೆ. ಅಲಿಬಾಬಾ ಮತ್ತು 4೦ ಜನ ಕಳ್ಳರ ಕಥೆಯಂತೆ ಬಿಜೆಪಿ ಪರಿಸ್ಥಿತಿ ಇದೆ. ಜೈಲಿಗೆ ಹೋದವರ ಪಕ್ಕ ನಿಲ್ಲಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ಮೋದಿ ಹೇಳಿವುದು ನಾಚಿಕೆ ಆಗಬೇಕು.ಜನಾರ್ಧನ ರೆಡ್ಡಿ ದಿನಕ್ಕೆ ಹತ್ತು ಕೋಟಿ ರೂಪಾಯಿ ಲೂಟಿ ಮಾಡುತ್ತಿದ್ದರುರೆಡ್ಡಿ ದೊಡ್ಡ ಲೂಟಿಕೋರ ಎಂದ ವಾಗ್ದಾಳಿ ನಡೆಸಿದ್ದಾರೆ.
 
ಈ ಚುನಾವಣೆ ಮಹತ್ವದ ಚುನಾವಣೆ ದೇಶದ ಭವಿಷ್ಯದ ರಾಜಕಾರಣಕ್ಕೆ ರಾಜ್ಯದ ಜನ ತೆಗೆದುಕೊಳ್ಳುವ ನಿರ್ಧಾರ ಐತಿಹಾಸಿಕ ವಾಗಲಿದೆ
 
ಬಿಜೆಪಿ ಐದು ವರ್ಷ ಅಧಿಕಾರದಲ್ಲಿ ಇತ್ತು. ಮೂರು ಜನ ಸಿಎಂ ಆಗಿದ್ದರೆ. ಬಿಎಸ್ ವೈ ಇನ್ನೂ ಬೇಲ್ ಮೇಲೆ ಇದ್ದಾರೆ. ಬಿ ಎಸ್ ವೈ ಮೇಲೆ 23 ಕೇಸ್ ಗಳಿವೆ. ದೇಶದ ಇತಿಹಾಸದಲ್ಲಿ ಸಿಎಂ ಇದ್ದವರು ಜೈಲಿಗೆ ಹೋದ ಉದಾಹರಣೆ ಇಲ್ಲ ಅದು ಬಿಎಸ್ ವೈ ಮಾತ್ರ ಎಂದು ಲೇವಡಿ ಮಾಡಿದರು.
 
ಸದಾನಂದ ಗೌಡ ನಗುವುದನ್ನ ಬಿಟ್ಟ ಏನು ಮಾಡಿಲ್ಲ 165 ಭರವಸೆ ಪೂರೈಸಿದ್ದೇವೆ ಚರ್ಚೆಗೆ ಬಿಎಸ್ ವೈ ಬರಲಿ.ಆದ್ರೆ ಬಿಎಸ್ ವೈ ಬರಲ್ಲ.ಧಮ್ ಇಲ್ಲನನ್ನ ಜೊತೆ ಚರ್ಚೆಗೆ ಬರಲು ಧಮ್ ಬೇಕು ಅದು ಬಿಎಸ್ ವೈಗೆ ಇಲ್ಲಾ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಯೋಗಿ ಆದಿತ್ಯನಾಥ್ ಭಾಷಣ ಕೇಳುವವರೇ ಇಲ್ವಂತೆ