Select Your Language

Notifications

webdunia
webdunia
webdunia
webdunia

ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ: ಸ್ವಾಮೀಜಿ ಹೇಳಿದ್ದೇನು?

ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ: ಸ್ವಾಮೀಜಿ ಹೇಳಿದ್ದೇನು?
ನೆಲಮಂಗಲ , ಗುರುವಾರ, 3 ಜನವರಿ 2019 (16:16 IST)
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಮಾಡಿರುವುದಕ್ಕೆ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

ನೆಲಮಂಗಲ ತಾಲೂಕಿನ ಶಿವಗಂಗೆಯ ಹೊನ್ನಮ್ಮಗವಿ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದ್ದು, ದೇಶಾದ್ಯಂತ ಬಹು ಚರ್ಚೆಯಲ್ಲಿದ್ದ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಯ್ಯಪ್ಪ ದೇಗುಲದ ವಿಚಾರದಲ್ಲಿ ಐದಾರು ತಿಂಗಳುಗಳಿಂದ ಅನೇಕ ಸಂಘರ್ಷಗಳು ನಡೆದಿವೆ.  ಸುಪ್ರೀಂ ಕೋಟ್೯ ಸಹ ಮಹಿಳೆಯರ ದೇಗುಲ ಪ್ರವೇಶಕ್ಕೆ ಅವಾಕಾಶ ಕಲ್ಪಿಸಬೇಕು ಎನ್ನುವ ತೀರ್ಮಾನ ನೀಡಿದೆ.

ಧರ್ಮ ಮತ್ತು ಪರಂಪರೆ ಅತ್ಯಂತ ಪವಿತ್ರವಾದದ್ದು, ಪೂಜ್ಯನಿಯವಾದದ್ದು. ಇವೆರಡರ ರಕ್ಷಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದಿದ್ದಾರೆ.

ಧರ್ಮ ಯಾವುದೇ ಕಾರಣಕ್ಕೂ ನಿಂತ ನೀರಾಗಬಾರದು. ಕೆಲವು ಆಚರಣೆಗಳು ಕಾಲಮಾನಕ್ಕೆ ತಕ್ಕಂತೆ ಬದಲಾವಣೆಗೆ ತೆಗೆದುಕೊಳ್ಳುತ್ತವೆ. ಅದೇ ರೀತಿ ನಮ್ಮ ಆಚಾರ ವಿಚಾರಕ್ಕೆ ಹಾಗೂ ದೇವರಿಗೆ ಅಗೌರವವನ್ನ ಸಲ್ಲಿಸಬಾರದು ಎಂದೂ ಹೇಳಿದ್ದಾರೆ.

ಶಬರಿಮಲೆಯ ಹಿಂದಿನ ಸಂಪ್ರದಾಯವನ್ನ ಪಾಲಿಸಿದರೆ ಅವಕಾಶವನ್ನ ಕಲ್ಪಿಸುವುದು ಅನಿವಾರ್ಯ ಹಾಗೂ ಅವಶ್ಯಕವಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.  

 

 

Share this Story:

Follow Webdunia kannada

ಮುಂದಿನ ಸುದ್ದಿ

ಆಯತಪ್ಪಿ ಬಿದ್ರು: ಯಮನ ಪಾದ ಸೇರಿದ್ರು!