Select Your Language

Notifications

webdunia
webdunia
webdunia
webdunia

ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಮಹಿಳಾ ಸಂಘದ ಸದಸ್ಯೆಯರು…!

ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಮಹಿಳಾ ಸಂಘದ ಸದಸ್ಯೆಯರು…!
ದಾವಣಗೆರೆ , ಸೋಮವಾರ, 30 ಜುಲೈ 2018 (17:04 IST)
ಮಹಿಳೆಯೊಬ್ಬಳನ್ನು ಮಹಿಳೆಯರೇ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ನಡೆದಿದೆ. ದಾವಣಗೆರೆ ತಾಲ್ಲೂಕಿನ ಬೇತೂರು ಗ್ರಾಮದಲ್ಲಿ ಘಟನೆ ನಡೆದಿದೆ. ಮಹಿಳಾ ಸಂಘವೊಂದರೆ ಸದಸ್ಯೆಯರಿಂದ ಮಹಿಳೆಯನ್ನು ಕಟ್ಟಿಹಾಕಿ ಥಳಿಸಲಾಗಿದೆ.

ಮಹಿಳಾ ಸಂಘದಲ್ಲಿ ಸಾಲ ಪಡೆದಿದ್ದ ಮಹಿಳೆಯೊಬ್ಬಳು ಕಳೆದ ಮೂರ್ನಾಲ್ಕು ಕಂತುಗಳನ್ನು ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಗ್ರಾಮದ ಮಧ್ಯದ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ ಇತರೆ ಸದಸ್ಯರು ಥಳಿಸಿದ್ದಾರೆ.

ರಾತ್ರಿ 11 ಗಂಟೆಯಿಂದ ಮೂರು ಗಂಟೆಯವರೆಗೂ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ. ತಡರಾತ್ರಿ ಗ್ರಾಮದ ಮುಖಂಡರ ಮನವೊಲಿಕೆ ನಂತರ ಮಹಿಳೆಯನ್ನು ಬಿಟ್ಟುಕಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾದರಿಯಾದ ಕುರಿಗಾಹಿಯ ಪರಿಸರ ಪ್ರೇಮ