Select Your Language

Notifications

webdunia
webdunia
webdunia
webdunia

ಮೈತ್ರಿ ಕಗ್ಗಂಟು ಮುರಿಯಲು ಇವರೇ ಆಗ್ತಾರಾ ಕರ್ನಾಟಕದ ಹೊಸ ಸಿಎಂ?!

ಮೈತ್ರಿ ಕಗ್ಗಂಟು ಮುರಿಯಲು ಇವರೇ ಆಗ್ತಾರಾ ಕರ್ನಾಟಕದ ಹೊಸ ಸಿಎಂ?!
ಬೆಂಗಳೂರು , ಸೋಮವಾರ, 14 ಮೇ 2018 (09:23 IST)
ಬೆಂಗಳೂರು: ಎಕ್ಸಿಟ್ ಪೋಲ್ ಫಲಿತಾಂಶ ನೋಡಿದ ಬಳಿಕ ರಾಜಕೀಯ ಪಕ್ಷಗಳು ಮೈತ್ರಿ ಸರ್ಕಾರ ರಚಿಸಲು ಸಜ್ಜಾಗಿವೆ. ಆದರೆ ಮೈತ್ರಿಗೆ ಎದುರಾಗಿರುವ ಕಗ್ಗಂಟು ಬಿಡಿಸುವುದೇ ಕಾಂಗ್ರೆಸ್, ಜೆಡಿಎಸ್ ಗೆ ತಲೆನೋವಾಗಿದೆ.

ಒಂದು ವೇಳೆ ಯಾರಿಗೂ ಬಹುಮತ ಬಾರದೇ ಹೋದರೆ ಕಾಂಗ್ರೆಸ್ ಗೆ ಜೆಡಿಎಸ್ ನ ಬೆಂಬಲ ಕೇಳಬೇಕಾಗಿ ಬರಬಹುದು. ಹಾಗಾದ ಪಕ್ಷದಲ್ಲಿ ಜೆಡಿಎಸ್ ಸಿದ್ದರಾಮಯ್ಯ ಸಿಎಂ ಆಗಬಾರದು ಎಂಬ ಷರತ್ತು ವಿಧಿಸಬಹುದು.

ಒಂದು ವೇಳೆ ಹೀಗಾದರೆ ಕಾಂಗ್ರೆಸ್ ಅನಿವಾರ್ಯವಾಗಿ ದಲಿತ ಅಭ್ಯರ್ಥಿಯೊಬ್ಬರಿಗೆ ಮಣೆ ಹಾಕಬೇಕಾಗುತ್ತದೆ. ಹಾಗಾದ ಪಕ್ಷದಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅಥವಾ ಜಿ ಪರಮೇಶ್ವರ್ ರನ್ನು ಸಿಎಂ ಮಾಡುವ ಸೂತ್ರವನ್ನು ಕಾಂಗ್ರೆಸ್ ಮುಂದಿಡಬಹುದು.

ಸಿದ್ದರಾಮಯ್ಯ ಕೂಡಾ ದಲಿತ ಅಭ್ಯರ್ಥಿ ಸಿಎಂ ಆದರೆ ತಮ್ಮ ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದಿದ್ದಾರೆ. ಹಾಗಾಗಿ ಕರ್ನಾಟಕಕ್ಕೆ ಹೊಸ ಮುಖ್ಯಮಂತ್ರಿ ಯಾರಾಗಿರಬಹುದು ಎಂಬ ಕುತೂಹಲ ಮೂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಫಲಿತಾಂಶಕ್ಕೂ ಮೊದಲೇ ಜನತೆಗೆ ಕರೆಂಟ್ ಶಾಕ್!