Select Your Language

Notifications

webdunia
webdunia
webdunia
webdunia

ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ ಶಾಲೆಗಳಿಗೆ ರಜೆ ನೀಡಬೇಕೇ?

Lord Rama

Krishnaveni K

ಬೆಂಗಳೂರು , ಶುಕ್ರವಾರ, 19 ಜನವರಿ 2024 (10:51 IST)
ಬೆಂಗಳೂರು: ಜನವರಿ 22 ರಂದು ಸೋಮವಾರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ಲೋಕಾರ್ಪಣೆಯಾಗುತ್ತಿದೆ. ಈ ದಿನ ಶಾಲೆಗಳಿಗೆ ರಜೆ ಘೋಷಿಸಬೇಕೇ ಎಂಬ ಚರ್ಚೆ ಶುರುವಾಗಿದೆ.

ಉತ್ತರ ಪ್ರದೇಶ, ಛತ್ತೀಸ್ ಘಡ ಸೇರಿದಂತೆ ಕೆಲವು ಬಿಜೆಪಿ ಆಡಳಿತವಿರುವ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಈಗಾಗಲೇ ಈ ದಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಜನವರಿ 22 ರಂದು ಮದ್ಯ ಮಾರಾಟವನ್ನೂ ನಿಷೇಧಿಸಿ ಡ್ರೈ ಡೇ ಆಚರಿಸಲಾಗುತ್ತಿದೆ. ಇದೀಗ ರಾಜ್ಯಗಳಲ್ಲೂ ಶಾಲೆಗಳಿಗೆ ರಜೆ ಘೋಷಿಸಬೇಕೇ ಎಂಬ ಬಗ್ಗೆ ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿದ್ದಾರೆ. ಈ ದಿನ ಶಾಲೆಗಳಿಗೆ ರಜೆ ಬೇಡ. ಅದರ ಬದಲು ರಾಮಮಂದಿರ ಉದ್ಘಾಟನೆಯ ಲೈವ್ ನ್ನು ಶಾಲೆಗಳಲ್ಲಿಯೇ ತೋರಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಶಾಲೆಗಳು ಈಗ ವರ್ಷದ ಕೊನೆಯ ಹಂತದಲ್ಲಿದ್ದು, ಪಠ್ಯಕ್ರಮ ಮುಕ್ತಾಯಗೊಳಿಸುವ ಧಾವಂತದಲ್ಲಿವೆ. ಈ ಸಂದರ್ಭದಲ್ಲಿ ರಜೆ ನೀಡಿದರೆ ಮಕ್ಕಳ ಓದಿಗೆ ತೊಂದರೆಯಾಗಬಹುದು ಎಂಬುದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ರಾಮಮಂದಿರ ಉದ್ಘಾಟನೆಯನ್ನು ಮಕ್ಕಳು ಕಣ್ತುಂಬಿಕೊಳ್ಳಲು ಶಾಲೆಗಳಿಗೆ ರಜೆ ನೀಡಬೇಕೆಂದು ಆಗ್ರಹಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಮಲಲ್ಲಾ ಮೂರ್ತಿ ಮೊದಲ ಬಾರಿಗೆ ಅನಾವರಣ