Select Your Language

Notifications

webdunia
webdunia
webdunia
webdunia

1 ಕೆಜಿ ಚಿನ್ನಾಭರಣ ವಶವಾಗಿದ್ದು ಎಲ್ಲಿ?

1 ಕೆಜಿ ಚಿನ್ನಾಭರಣ ವಶವಾಗಿದ್ದು ಎಲ್ಲಿ?
ಬೆಂಗಳೂರು , ಬುಧವಾರ, 27 ಫೆಬ್ರವರಿ 2019 (14:08 IST)
ಕುಖ್ಯಾತ ಅಂತರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಅವರಿಂದ 1 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ರೈಲುಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸುತ್ತ ಸಹ ಪ್ರಯಾಣಿಕರ ಲಗೇಜ್, ಬ್ಯಾಗ್ಗಳನ್ನು ಇಳಿಸುವ ನೆಪ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಕಳ್ಳರ ಗ್ಯಾಂಗ್ನ್ನು ಬಂಧಿಸಿರುವ ರೈಲ್ವೆ ಪೊಲೀಸರು 1 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ದೆಹಲಿಯ ಸುಲ್ತಾನ್ ಪ್ರಿಯಾ, ರಣವೀರ್ ಸಿಂಗ್ (43), ಸತ್ಬೀರ್ (46), ವಿನೋದ್ (31), ಲಲಿತ್ ಕುಮಾರ್ (27) ಹಾಗೂ ಹರಿಯಾಣದ ಇಸ್ಸಾರದ ಶುಭಾಷ್ (44) ಬಂಧಿತ ಕಳ್ಳರಾಗಿದ್ದಾರೆ.
ಬಂಧಿತರಿಂದ 28 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ರೈಲ್ವೆ ಎಸ್ಪಿ ಭೀಮಾಶಂಕರ್ ಗುಳೇದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಗ್ಯಾಂಗ್ ಕಟ್ಟಿಕೊಂಡು ದೆಹಲಿಯಿಂದ ಬಂದು ರಾಜ್ಯದ ವಿವಿಧೆಡೆ ರೈಲುಗಳಲ್ಲಿ ಪ್ರಯಾಣಿಕರಂತೆ ಸಂಚರಿಸುತ್ತಿದ್ದರು. ಶ್ರೀಮಂತ ಪ್ರಯಾಣಿಕರನ್ನು ಗುರುತಿಸಿ ಅವರ ಲಗೇಜ್, ಬ್ಯಾಗ್ಗಳನ್ನು ಇಳಿಸುವ ವೇಳೆ ಸಹಾಯ ಮಾಡುವ ನೆಪಮಾಡಿ ಬ್ಯಾಗ್ಗಳಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಹೇಳಿದ ಮಾತು ಪಾಕ್ ಕೇಳಲಿಲ್ಲ, ಅದಕ್ಕೇ ದಾಳಿ ಮಾಡಿದೆವು: ಚೀನಾ ಬಳಿ ಪಾಕ್ ಗೆ ದೂರು